ನಟ ಫೃಥ್ವಿರಾಜ್‌ ಇಂದು ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ‘ಬ್ರೊ ಡ್ಯಾಡಿ’ ಮಲಯಾಳಂ ಸಿನಿಮಾದ ಫಸ್ಟ್‌ಲುಕ್‌ ಹಂಚಿಕೊಂಡಿದ್ದಾರೆ. ‘ಲೂಸಿಫರ್‌’ ನಂತರ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡನೇ ಚಿತ್ರವಿದು. ‘ಬ್ರೊ ಡ್ಯಾಡಿ’ ನೇರವಾಗಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನಟ ಪೃಥ್ವಿರಾಜ್‌ ‘ಲೂಸಿಫರ್‌’ (2019) ಚಿತ್ರದೊಂದಿಗೆ ನಿರ್ದೇಶಕರಾಗಿ ಪರಿಚಯವಾಗಿದ್ದರು. ಈ ಯಶಸ್ವೀ ಸಿನಿಮಾ ನಂತರ ಅವರ ನಿರ್ದೇಶನದಲ್ಲಿ ‘ಬ್ರೊ ಡ್ಯಾಡಿ’ ಸಿದ್ಧವಾಗುತ್ತಿದೆ. ಇಲ್ಲಿ ಮೋಹನ್‌ಲಾಲ್‌ ಅವರೊಂದಿಗೆ ಪೃಥ್ವಿರಾಜ್‌ ಕೂಡ ನಟಿಸುತ್ತಿದ್ದಾರೆ. ಇಂದು ಪೃಥ್ವಿರಾಜ್‌ ತಮ್ಮ ಸಿನಿಮಾದ ಫಸ್ಟ್‌ ಲುಕ್‌ ಶೇರ್‌ ಮಾಡಿದ್ದು, ಶೀಘ್ರದಲ್ಲೇ ಸಿನಿಮಾ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಇದೊಂದು ಕಾಮಿಡಿ ಎಂಟರ್‌ಟೇನರ್‌ ಎನ್ನಲಾಗಿದ್ದು, ಚಿತ್ರದ ಸಂಪೂರ್ಣ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. ಆಂಟೋನಿ ಪೆರಂಬವೂರ್‌ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಕಲ್ಯಾಣಿ ಪ್ರಿಯದರ್ಶನ್‌, ಮೀನಾ, ಲಾಲೂ ಅಲೆಕ್ಸ್‌, ಮುರಳಿ ಗೋಪಿ, ಕನಿಹಾ ಇತರರಿದ್ದಾರೆ.

ಇನ್ನು ಪೃಥ್ವಿರಾಜ್‌ ಮತ್ತೆರೆಡು ಸಿನಿಮಾಗಳ ನಿರ್ದೇಶನಕ್ಕೆ ಸಿದ್ಧವಾಗುತ್ತಿದ್ದಾರೆ. ‘ಲೂಸಿಫರ್‌’ ಫ್ರ್ಯಾಂಚೈಸ್‌ ‘ಎಂಪುರಾನ್‌’ ಈಗಾಗಲೇ ಘೋಷಣೆಯಾಗಿದೆ. ಮುರಳಿ ಗೋಪಿ ಅವರು ಚಿತ್ರಕಥೆ ರಚಿಸುತ್ತಿದ್ದಾರೆ. 2022ರ ಜನವರಿಗೆ ಸಿನಿಮಾ ಸೆಟ್ಟೇರಲಿದೆ. ಇನ್ನು ಮೋಹನ್‌ ಲಾಲ್‌ ‘ಬರೋಝ್‌’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಫ್ಯಾಂಟಸಿ ಡ್ರಾಮಾ ಸಿನಿಮಾ ಮೂಲಕ ಮೋಹನ್‌ಲಾಲ್‌ ನಿರ್ದೇಶಕರಾಗುತ್ತಿದ್ದಾರೆ ಎನ್ನುವುದು ವಿಶೇಷ. ಪೃಥ್ವಿರಾಜ್‌ ಕೂಡ ಈ ಚಿತ್ರದಲ್ಲಿ ನಟಿಸಬೇಕಿತ್ತು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಅವರು ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಸದ್ಯ ಶಾಜಿ ಕೈಲಾಸ್‌ ನಿರ್ದೇಶನದ ‘ಕಡುವ’ ಸಿನಿಮಾ ಶೂಟಿಂಗ್‌ನಲ್ಲಿದ್ದಾರವರು.

LEAVE A REPLY

Connect with

Please enter your comment!
Please enter your name here