‘ಸಲಾರ್‌’ ಸಿನಿಮಾ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದ ನಟ ಪ್ರಭಾಸ್‌ ನೂತನ ಸಿನಿಮಾ ಶುರುವಾಗಿದೆ. ಮಾರುತಿ ರಚಿಸಿ, ನಿರ್ದೇಶಿಸುತ್ತಿರುವ ಚಿತ್ರಕ್ಕೆ ‘ರಾಜಾಸಾಬ್‌’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. People Media Factory ಬ್ಯಾನರ್‌ ನಿರ್ಮಾಣದ ಚಿತ್ರಕ್ಕೆ ತಮನ್‌ ಎಸ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಪ್ರಭಾಸ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ದಿ ರಾಜಾಸಾಬ್’ ತೆಲುಗು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಾರುತಿ ರಚಿಸಿ, ನಿರ್ದೇಶಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಬಿಡುಗಡೆಯ ಪೋಸ್ಟರ್‌ನಲ್ಲಿ ಪ್ರಭಾಸ್‌ ಸಾಮಾನ್ಯ ಉಡುಗೆಯಾದ ಪಂಚೆ ಮತ್ತು ಶರ್ಟ್‌ನಲ್ಲಿ ಕಂಗೊಳಿಸಿದ್ದಾರೆ. ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್‌ ಮತ್ತು ರಿದ್ಧಿ ಕುಮಾರ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾಗೆ ಹಿಂದೆ ‘ರಾಜಾ ಡಿಲಕ್ಸ್’ ಎಂದು ಕರೆಯಲಾಗಿತ್ತು. ಕಾಮಿಡಿ ಎಂಟರ್‌ಟೇನರ್‌ ಆಗಿರಬಹುದು ಎಂದು ನಿರೀಕ್ಷಿಸಲಾಗಿರುವ ಈ ಸಿನಿಮಾವನ್ನು People Media Factory ಬ್ಯಾನರ್‌ ಅಡಿಯಲ್ಲಿ TG ವಿಶ್ವ ಪ್ರಸಾದ್‌ ನಿರ್ಮಿಸುತ್ತಿದ್ದು, ತಮನ್‌ S ಸಂಗೀತ ಸಂಯೋಜಿಸುತ್ತಿದ್ದಾರೆ. ಕಾರ್ತಿಕ್‌ ಪಳನಿ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್‌ ಸಂಕಲನ ನಿರ್ವಹಿಸಲಿದ್ದಾರೆ. ತಿಂಗಳ ಹಿಂದೆ ತೆರೆಕಂಡ ಪ್ರಭಾಸ್‌ ಅಭಿನಯದ ‘ಸಲಾರ್‌’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಕಲ್ಕಿ 2898 AD’, ತೆರೆಗೆ ಸಿದ್ಧವಾಗಿರುವ ಅವರ ಬಹುನಿರೀಕ್ಷಿತ ಹಿಂದಿ ಸಿನಿಮಾ.

LEAVE A REPLY

Connect with

Please enter your comment!
Please enter your name here