ಯಶಸ್ವೀ ‘ಗೂಢಾಚಾರಿ’ ತೆಲುಗು ಸಿನಿಮಾದ ಸರಣಿ ‘ಗೂಢಾಚಾರಿ 2’ಗೆ ಚಾಲನೆ ಸಿಕ್ಕಿದೆ. ವಿನಯ್‌ ಕುಮಾರ್‌ ಸಿರಿಗಿನೀಡಿ ನಿರ್ದೇಶನದ ಚಿತ್ರದಲ್ಲಿ ಹೀರೋ ಅಡಿವಿ ಶೇಷ್‌ spy agent ಆಗಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಬನಿತಾ ಸಂಧು ಚಿತ್ರದ ನಾಯಕಿ.

ಅಡಿವಿ ಶೇಷ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಯಶಸ್ವೀ ‘ಗೂಢೂಚಾರಿ’ ತೆಲುಗು ಚಿತ್ರದ ಸರಣಿ ‘ಗೂಡಾಚಾರಿ 2’ ಚಿತ್ರೀಕರಣ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಈ ಚಿತ್ರವನ್ನು ವಿನಯ್ ಕುಮಾರ್ ಸಿರಿಗಿನೀಡಿ ನಿರ್ದೇಶಿಸುತ್ತಿದ್ದಾರೆ. ಈ ಕುರಿತು ತಮ್ಮ Instagram ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಡಿವಿ ಶೇಷ್‌, ‘Loved shooting for this scene’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ‘ಗೂಢಾಚಾರಿ’ ಸರಣಿ ಇದಾಗಿದ್ದು, ಇದು ಭಾರತದ ಹೊರಗೆ ತನ್ನ ದೇಶಕ್ಕಾಗಿ ಹೋರಾಡುವ ಗೂಢಚಾರರ ಕಥೆಯನ್ನು ಹೇಳಲಿದೆ. ಚಿತ್ರದಲ್ಲಿನ ಅಡಿವಿ ಶೇಷ್ ಅವರ ಫಸ್ಟ್‌ಲುಕ್ ಬಿಡುಗಡೆಯಾದಾಗಿನಿಂದ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ. ಈ ಆಕ್ಷನ್ ಸ್ಪೈ ಚಿತ್ರದ ನಾಯಕಿಯಾಗಿ ಬನಿತಾ ಸಂಧು ಕಾಣಿಸಿಕೊಳ್ಳಲಿದ್ದಾರೆ.

People Media Factory ಮತ್ತು Abhishek Agarwal Arts ಬ್ಯಾನರ್‌ ಅಡಿಯಲ್ಲಿ ಟಿಜಿ ವಿಶ್ವ ಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್ ಚಿತ್ರ ನಿರ್ಮಿಸುತ್ತಿದ್ದಾರೆ. 2018ರಲ್ಲಿ ತೆರೆಕಂಡಿದ್ದ ‘ಗೂಢಾಚಾರಿ’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಆ ಚಿತ್ರದಲ್ಲಿ ಶೋಭಿತಾ ಧೂಳಿಪಾಲ, ಜಗಪತಿ ಬಾಬು, ಪ್ರಕಾಶ್ ರಾಜ್, ಸುಪ್ರಿಯಾ ಯರ್ಲಗಡ್ಡ, ವೆನ್ನೆಲ ಕಿಶೋರ್, ಅನೀಶ್ ಕುರುವಿಲ್ಲ, ಮಧು ಶಾಲಿನಿ ಪ್ರಮುಖ ಪಾತ್ರಗಳಲ್ಲಿದ್ದರು.

LEAVE A REPLY

Connect with

Please enter your comment!
Please enter your name here