OTTಯಲ್ಲಿ ನೇರವಾಗಿ ಬಿಡುಗಡೆಯಾಗಿದ್ದ ‘ಭಾಮಕಲಾಪಂ’ ಮುಂದುವರೆದ ಭಾಗ ‘ಭಾಮಕಲಾಪಂ 2’. ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅಭಿಮನ್ಯು ತಡಿಮೇಟಿ ನಿರ್ದೇಶನದ ಭಾಗ 2 ಥಿಯೇಟರ್‌ನಲ್ಲಿ ತೆರೆಕಾಣಲಿದೆ.

ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿರುವ ‘ಭಾಮಕಲಾಪಂ 2’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾ Ahaನಲ್ಲಿ ಬಿಡುಗಡೆಯಾಗಿದ್ದ ‘ಭಾಮಕಲಾಪಂ’ ಸಿನಿಮಾದ ಮುಂದುವರೆದ ಭಾಗವಾಗಿದೆ. ಚಲನಚಿತ್ರವನ್ನು ಅಭಿಮನ್ಯು ತಡಿಮೇಟಿ ನಿರ್ದೇಶಿಸಿದ್ದಾರೆ. ಟೀಸರ್, ಸಸ್ಪೆನ್ಸ್ ಡೈಲಾಗ್‌ಗಳೊಂದಿಗೆ ಕೂಡಿದ್ದು, ಪ್ರಿಯಾಮಣಿ ಮತ್ತು ಶರಣ್ಯ ದರೋಡೆಯನ್ನು ನಡೆಸುವುದರ ಬಗ್ಗೆ ಸುಳಿವು ನೀಡುತ್ತದೆ. ಪ್ರಿಯಾಮಣಿ ಭಾಗ-1 ರಲ್ಲಿ ನಿರ್ವಹಿಸಿದ್ದ ಅನುಪಮಾ ಪಾತ್ರವನ್ನು ಪುನರಾವರ್ತಿಸಿದ್ದು, ಶರಣ್ಯ ಕೆಲಸದವಳಾಗಿಯೇ ಪಾತ್ರ ಮುಂದುವರೆಸಿದ್ದಾಳೆ. ಇವರಿಬ್ಬರೂ ಸೇರಿ ದರೋಡೆ ಮಾಡಲು ಯೋಜನೆ ರೂಪಿಸಿವ ಚರ್ಚೆಯಲ್ಲಿ ತೊಡಗುತ್ತಾರೆ. ಈ ಚಿತ್ರವನ್ನು Dream Farmers ಬ್ಯಾನರ್‌ ಅಡಿಯಲ್ಲಿ ಬಾಪಿನೀಡು ಭೋಗವಲ್ಲಿ ಮತ್ತು ಸುಧೀರ್ ಎಡರ ನಿರ್ಮಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗವು ಫೆಬ್ರವರಿ 11, 2022ರಂದು ಬಿಡುಗಡೆಯಾಗಿ 4 ಮಿಲಿಯನ್ ವೀಕ್ಷಣೆ ಗಳಿಸಿತ್ತು. ಈಗ ಅದರ ಮುಂದುವರಿದ ಭಾಗವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

LEAVE A REPLY

Connect with

Please enter your comment!
Please enter your name here