ಸಲ್ಮಾನ್ ಖಾನ್ ಮತ್ತು ಆಯುಶ್ ಶರ್ಮಾ ಅಭಿನಯದ ‘ಅಂತಿಮ್‌’ ಹಿಂದಿ ಸಿನಿಮಾ ನಾಡಿದ್ದು ತೆರೆಕಾಣುತ್ತಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಅಭಿನಯಸಿದ್ದಾರೆ. ಸಲ್ಲೂಗೆ ಜೋಡಿಯಾಗಿ ಪ್ರಜ್ಞಾರ ಸನ್ನಿವೇಶಗಳನ್ನೂ ಚಿತ್ರಿಸಲಾಗಿತ್ತು. ಕೊನೆಯ ಹಂತದಲ್ಲಿ ಈ ಸನ್ನಿವೇಶಗಳನ್ನು ಕೈಬಿಡಲಾಗಿದೆ.

ಬಾಲಿವುಡ್ ನಟಿ ಪ್ರಜ್ಞಾ ಜಸ್ವಾಲ್‌ ಬೇಸರದಲ್ಲಿದ್ದಾರೆ. ‘ಅಂತಿಮ್‌’ ಹಿಂದಿ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ಅವರು ಜೋಡಿಯಾಗಿದ್ದರು. ಸಲ್ಮಾನ್‌ – ಪ್ರಜ್ಞಾ ಜೋಡಿಯ ಕೆಲವು ಸನ್ನಿವೇಶ ಮತ್ತು ಹಾಡುಗಳೂ ಚಿತ್ರಣಗೊಂಡಿದ್ದವು. ಕೊನೆಯ ಹಂತದಲ್ಲಿ ಈ ಸನ್ನಿವೇಶಗಳು ಚಿತ್ರದಲ್ಲಿನ ಸಲ್ಮಾನ್ ಖಾನ್‌ ಪಾತ್ರಕ್ಕೆ ಹಿನ್ನೆಡೆಯಾಗುತ್ತವೆ ಎನ್ನುವ ಕಾರಣಕ್ಕೆ ಈ ರೊಮ್ಯಾಂಟಿಕ್‌ ಸನ್ನಿವೇಶಗಳಿಗೆ ಕತ್ತರಿ ಹಾಕಲಾಗಿದೆ. ನಿರ್ದೇಶಕ ಮಹೇಶ್ ಮಂಜ್ರೇಕರ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಟೈಟಲ್ ಕಾರ್ಡ್‌ನಲ್ಲಿ ಪ್ರಜ್ಞಾ ಜಸ್ವಾಲ್‌ರಿಗೆ ‘ಸ್ಪೆಷಲ್ ಥ್ಯಾಂಕ್ಸ್‌’ ಹೇಳುವ ಮೂಲಕ ಅವರಿಗೆ ಋಣಸಂದಾಯ ಮಾಡಿದ್ದಾರೆ.

“ಚಿತ್ರಕ್ಕೆ ನಾನು ಕತೆ ರಚಿಸುವುದಾಗಿ ಹೇಳಿದಾಗ ಸಲ್ಮಾನ್ ಖುಷಿಯಿಂದ ಒಪ್ಪಿದ್ದರು. ಸಲ್ಮಾನ್‌ಗೆ ನಾಯಕಿ ಇಲ್ಲದಿದ್ದರೆ ಸಿನಿಮಾ ಮಾರಾಟ ಮಾಡುವುದು ಕಷ್ಟ ಎಂದು ಕೆಲವರು ಅಭಿಪ್ರಯಾಪಟ್ಟರು. ನಾನು ನಾಯಕಿಯ ಕೆಲವು ಸನ್ನಿವೇಶ ಮತ್ತು ಎರಡು ಹಾಡುಗಳನ್ನು ಸೇರ್ಪಡೆಗೊಳಿಸಿದೆ. ಕೊನೆಗೆ ಸಲ್ಮಾನ್ ತಮಗೆ ನಾಯಕಿ, ಹಾಡುಗಳು ಬೇಡವೆಂದಾಗ ಈ ಸನ್ನಿವೇಶಗಳನ್ನು ಕೈಬಿಟ್ಟೆವು” ಎಂದಿದ್ದಾರೆ ನಿರ್ದೇಶಕ ಮಹೇಶ್ ಮಂಜ್ರೇಕರ್‌. ಬಾಲಿವುಡ್‌ನ ಸ್ಟಾರ್ ಹೀರೋ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ನಟಿಸುವ ಅವಕಾಶದಿಂದ ಥ್ರಿಲ್ಲಾಗಿದ್ದ ನಟಿ ಪ್ರಜ್ಞಾ ತಮ್ಮ ಸೀನ್‌ಗಳಿಗೆ ಕತ್ತರಿ ಬಿದ್ದಿರುವುದರಿಂದ ಅಸಮಾಧಾನಗೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here