ಕರಣ್‌ ಜೋಹರ್‌ ನಿರ್ದೇಶನದ ಬಹುತಾರಗಣದ ‘ಕಭಿ ಖುಷಿ ಕಭಿ ಘಮ್‌’ ಹಿಂದಿ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷ. ಈ ಚಿತ್ರದಲ್ಲಿನ ಕೆಲವು ಐಕಾನಿಕ್‌ ಸೀನ್‌ಗಳನ್ನು ಅನುಕರಿಸಿರುವ ಬಾಲಿವುಡ್‌ ತಾರೆಯರು ತಮ್ಮ ಇನ್‌ಸ್ಟಾದಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಅಮಿತಾಭ್‌ ಬಚ್ಚನ್‌, ಜಯಬಾಧುರಿ, ಶಾರುಖ್‌ ಖಾನ್‌, ಕಾಜೋಲ್‌, ಹೃತಿಕ್‌ ರೋಷನ್‌, ಕರೀನಾ ಕಪೂರ್‌ ಮುಂತಾದವರು ನಟಿಸಿದ್ದ ‘ಕಭಿ ಖುಷಿ ಕಭಿ ಘಮ್‌’ ಸೂಪರ್‌ಹಿಟ್‌ ಹಿಂದಿ ಸಿನಿಮಾ. ಕರಣ್‌ ಜೋಹರ್‌ ನಿರ್ದೇಶನದಲ್ಲಿ ತೆರೆಕಂಡ ಈ ಐಕಾನಿಕ್‌ ಚಿತ್ರ ತೆರೆಕಂಡು ಇಂದಿಗೆ 20 ವರ್ಷ. ಈ ಸಿನಿಮಾದಲ್ಲಿನ ಡೈಲಾಗ್‌, ಲವ್‌, ರೊಮ್ಯಾನ್ಸ್‌, ಡ್ಯಾನ್ಸ್‌, ಮ್ಯೂಸಿಕ್‌.. ಹೀಗೆ ಮೆಚ್ಚುಗೆಯ ಸಾಕಷ್ಟು ಅಂಶಗಳಿವೆ. ಸಿನಿಮಾ ಎರಡು ದಶಕಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ನ ಕೆಲವು ತಾರೆಯರು ಚಿತ್ರದ ಕೆಲವು ಸನ್ನಿವೇಶಗಳನ್ನು ಅನುಕರಿಸಿ ವೀಡಿಯೋ ಮಾಡಿದ್ದಾರೆ. ಚಿತ್ರದಲ್ಲಿ ನಟಿಸಿದ್ದ ಕಾಜೋಲ್‌ ಅವರು ಸಿನಿಮಾದಲ್ಲಿನ ತಮ್ಮ ವೀಡಿಯೋಗಳನ್ನು ಹಾಕಿ ‘ಡ್ರಾಮಾ’ ಎಂದಿದಾರೆ! ಯುವನಟಿ ಜಾಹ್ನವಿ ಕಪೂರ್‌ ಅವರು ‘K3G’ಯ ಕರೀನಾ ಕಪೂರ್‌ ಇಂಟ್ರಡಕ್ಷನ್‌ ಸೀನ್‌ ಅನುಕರಿಸಿದ್ದಾರೆ. ಚಿತ್ರದಲ್ಲಿ ನಟಿಸಿದ್ದ ಹಾಸ್ಯನಟ ಜಾನಿ ಲಿವರ್‌, ಯುವ ತಾರೆಯರಾದ ಅನನ್ಯಾ ಪಾಂಡೆ, ಸಿದ್ದಾರ್ಥ್‌ ಮಲ್ಹೋತ್ರಾ ಕೂಡ ವೀಡಿಯೋ ಹಾಕಿದ್ದಾರೆ. ಚಿತ್ರದಲ್ಲಿ ಶಾರುಖ್‌ ಪುತ್ರನ ಪಾತ್ರದಲ್ಲಿ ನಟಿಸಿದ್ದ ಜಿಬ್ರಾನ್‌ ಖಾನ್‌ ಈಗ ಮೂವತ್ತರ ಆಸುಪಾಸಿನ ಯುವಕ. ಅವರು ಚಿತ್ರದಲ್ಲಿನ ತಮ್ಮ ಡೈಲಾಗ್‌ ಹೇಳಿದ್ದಾರೆ. ಕರೀನಾರ ಚಿಕ್ಕಂದಿನ ಪಾತ್ರ ಮಾಡಿದ್ದ ಮಾಳವಿಕಾ ರಾಜ್‌, ನಟಿ ಅಲಿಯಾ ಭಟ್‌, ನಟ ರಣವೀರ್‌ ಸಿಂಗ್‌ ಕೂಡ ವೀಡಿಯೋಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here