ಪ ರಂಜಿತ್‌ ನಿರ್ದೇಶನದ ಬಹುನಿರೀಕ್ಷಿತ ‘ತಂಗಲಾನ್‌’ ತಮಿಳು ಸಿನಿಮಾದಲ್ಲಿನ ನಟಿ ಮಾಳವಿಕಾ ಮೋಹನನ್‌ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ವಿಕ್ರಂ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವನ್ನು 2D ಮತ್ತು 3Dಯಲ್ಲಿ ಚಿತ್ರಿಸಲಾಗುತ್ತಿದೆ.

ವಿಕ್ರಂ ಅಭಿನಯದ ಈ ವರ್ಷದ ಬಹುನಿರೀಕ್ಷಿತ ‘ತಂಗಲಾನ್‌’ ಚಿತ್ರದಲ್ಲಿನ ನಟಿ ಮಾಳವಿಕಾ ಮೋಹನನ್‌ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಪ ರಂಜಿತ್‌ ನಿರ್ದೇಶನದ ಈ ಸಿನಿಮಾದಲ್ಲಿ ಮಾಳವಿಕಾ ಅವರು ಬುಡಕಟ್ಟು ಜನಾಂಗದ ಶೂರ ಮಹಿಳೆ ‘ಆರತಿ’ಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ವತಿ ತಿರುವೊಟ್ಟು, ಪಶುಪತಿ, ಪ್ರೀತಿ ಕಿರಣ್‌, ಹರಿ ಕ್ರಿಷ್ಣನ್‌, ಹಾಲಿವುಡ್‌ ನಟ ಡೇನಿಯಲ್ ಕ್ಯಾಲ್ಟ್‌ಗಿರೋನ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ‘ತಂಗಲಾನ್’ ದೊಡ್ಡ ಬಜೆಟ್ ಆಕ್ಷನ್ ಚಲನಚಿತ್ರವಾಗಿದ್ದು, 2D ಮತ್ತು 3Dಯಲ್ಲಿ ಚಿತ್ರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಿದು. ಜಿ ವಿ ಪ್ರಕಾಶ್ ಸಂಗೀತ ಸಂಯೋಜನೆ, ಕಿಶೋರ್ ಕುಮಾರ್ ಛಾಯಾಗ್ರಾಹಕ ಚಿತ್ರಕ್ಕಿದೆ.

Previous articleಸೆಟ್ಟೇರಿದ ‘Chef ಚಿದಂಬರ’ | ಅನಿರುದ್ಧ ನಟನೆಯ ಡಾರ್ಕ್‌ ಕಾಮಿಡಿ ಸಿನಿಮಾ
Next articleಬಿಗಿಯಿಲ್ಲದ ಚಿತ್ರಕಥೆ, ಗೋಜಲು ನಿರೂಪಣೆ, ಬಾಲಿಶ ಪಾತ್ರಪೋಷಣೆ

LEAVE A REPLY

Connect with

Please enter your comment!
Please enter your name here