KVN ಪ್ರೊಡಕ್ಷನ್ಸ್‌ ನೂತನ ಸಿನಿಮಾ ಘೋಷಿಸಿದೆ. ಈ ಚಿತ್ರದ ಮೂಲಕ ನಟ ದರ್ಶನ್‌ ಮತ್ತು ನಿರ್ದೇಶಕ ಪ್ರೇಮ್‌ ಇಪ್ಪತ್ತು ವರ್ಷಗಳ ನಂತರ ಜೊತೆಯಾಗುತ್ತಿದ್ದಾರೆ.

2003ರಲ್ಲಿ ಪ್ರೇಮ್‌ ಅವರು ನಟ ದರ್ಶನ್‌ರಿಗೆ ನಿರ್ದೇಶಿಸಿದ್ದ ‘ಕರಿಯ’ ಸಿನಿಮಾ ಸೂಪರ್‌ಹಿಟ್‌ ಆಗಿತ್ತು. ರೌಡೀಯಿಸಂ ಹಿನ್ನೆಲೆಯ ಪ್ರೇಮಕತೆ ದರ್ಶನ್‌ ವೃತ್ತಿಬದುಕಿಗೆ ತಿರುವಾಗಿದ್ದು ಹೌದು. ಅದಾದ ನಂತರ ಮತ್ತೊಮ್ಮೆ ಪ್ರೇಮ್‌ – ದರ್ಶನ್‌ ಜೊತೆಯಾಗಿ ಸಿನಿಮಾ ಮಾಡಿರಲಿಲ್ಲ. ಇದೀಗ KVN ಪ್ರೊಡಕ್ಷನ್ಸ್‌ ಇಬ್ಬರನ್ನೂ ಒಗ್ಗೂಡಿಸಿ ಸಿನಿಮಾ ಮಾಡುತ್ತಿದೆ. 20 ವರ್ಷಗಳ ನಂತರ ಪ್ರೇಮ್‌ ಅವರು ದರ್ಶನ್‌ಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇಂದು ವೀಡಿಯೊವೊಂದರ ಮೂಲಕ KVN ಪ್ರೊಡಕ್ಷನ್ಸ್‌ ಈ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಪ್ರೇಮ್‌ ಅವರು KVN ಬ್ಯಾನರ್‌ನ ‘KD – The Devil’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಧ್ರುವ ಸರ್ಜಾ ಹೀರೋ ಆಗಿ ನಟಿಸುತ್ತಿರುವ ಚಿತ್ರವಿದು. ನಟ ದರ್ಶನ್‌ ಸದ್ಯ ‘ಕಾಟೇರ’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶಿಸುತ್ತಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದ ನಂತರ ಪ್ರೇಮ್‌ ಸಿನಿಮಾ ಸೆಟ್ಟೇರಲಿದೆ.

Previous articleLyca Productions ಸಿನಿಮಾದಲ್ಲಿ ನಿಖಿಲ್‌ ಕುಮಾರಸ್ವಾಮಿ | ದೇವೇಗೌಡರಿಂದ ಚಾಲನೆ
Next article69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ | ‘777 ಚಾರ್ಲಿ’ ಅತ್ಯುತ್ತಮ ಪ್ರಾದೇಶಿಕ ಸಿನಿಮಾ

LEAVE A REPLY

Connect with

Please enter your comment!
Please enter your name here