ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಅಫ್ಜಲ್‌ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಈಗ ‘ಹೊಸತರ’ ಚಿತ್ರದ ಮೂಲಕ ನಿರ್ದೇಶಕನಾಗಿ ಚಂದನವನಕ್ಕೆ ಪ್ರವೇಶಿಸುತ್ತಿದ್ದಾರೆ.

ಸಿನಿಮಾ ರಂಗದಲ್ಲಿ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಸಾಕಷ್ಟು ಮಂದಿ ಸಿನಿಮಾ ನಿರ್ದೇಶನಕ್ಕೀಳಿಯೋದನ್ನ ಕಂಡು ಕೇಳಿರುತ್ತೇವೆ. ಅಂತೆಯೇ ಇಲ್ಲೊಬ್ಬರು ನಟನಾಗಿ, ಕಾರ್ಯಕಾರಿ ನಿರ್ಮಾಪಕರಾಗಿ ಸಿನಿರಂಗಕ್ಕೆ ಪರಿಚಿತರಾಗಿದ್ದು, ಈಗ ಡೈರೆಕ್ಟರ್‌ ಆಗಿ ಬಡ್ತಿ ಪಡೆದಿದ್ದಾರೆ. ಹೌದು, ಅಫ್ಜಲ್‌ ಅವರು ಪತ್ರಕರ್ತರಾಗಿ, ನಟನಾಗಿ ಸಾಕಷ್ಟು ಮಂದಿಗೆ ಪರಿಚಿತರಾಗಿದ್ದಾರೆ. ಈಗ ‘ಹೊಸತರ’ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸಿನಿಮಾಗೆ ‘ಹೊಸತರ’ ಎಂದು ಟೈಟಲ್‌ ಇಡಲಾಗಿದೆ.

‘ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಹೊಸತರ’ ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದಲ್ಲೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಕಾಮಿಡಿ ಸ್ವಲ್ಪ ಹೆಚ್ಚಾಗಿಯೇ ಇದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿವೆ. ರಾಜು ಎಮ್ಮಿಗನೂರು ಸಂಗೀತ ಸಂಯೋಜನೆ ಮಾಡಿದರೆ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಇದೆ. ರಾಜೀವ್ ಗಣೇಶನ್ ಛಾಯಾಗ್ರಹಣ, ಆಂಥೋನಿ ಪಯಾನೋ (ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕಿದೆ. ಅಮೇರಿಕದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ. ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ. ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಕೊಡತ್ತೇನೆ’ ಎಂದು ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here