ಸಂತೋಷ್‌ ಆನಂದರಾಮ್‌ ನಿರ್ದೇಶನದ ‘ಯುವ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಹೊಂಬಾಳೆ ಬ್ಯಾನರ್‌ನ ಈ ಬಹುನಿರೀಕ್ಷಿತ ಚಿತ್ರದ ಮೂಲಕ ಯುವ ರಾಜಕುಮಾರ್‌ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ತಂದೆ – ಮಗನ ಸೆಂಟಿಮೆಂಟ್‌, ಕಾಲೇಜಿನ ಹೊಡೆದಾಟಗಳ ಭರ್ಜರಿ ಆಕ್ಷನ್‌ ಸನ್ನಿವೇಶಗಳು ಟ್ರೇಲರ್‌ನಲ್ಲಿವೆ. ಇದೇ ಮಾರ್ಚ್‌ 29ರಂದು ಸಿನಿಮಾ ತೆರೆಕಾಣಲಿದೆ.

ಯುವ ರಾಜಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಯುವ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದ ಟ್ರೇಲರ್‌ ನಿರೀಕ್ಷೆ ಮೂಡಿಸಿದೆ. ಟ್ರೇಲರ್‌ನಲ್ಲಿ ತಂದೆ – ಮಗನ ಬಾಂಧವ್ಯದ ಚಿತ್ರಣವಿದೆ. ಒಬ್ಬ ತಂದೆ ಏನನ್ನು ನಿರೀಕ್ಷಿಸದೇ ಒಂದು ಕುಟುಂಬಕ್ಕಾಗಿ ಏನೆಲ್ಲಾ ಮಾಡುತ್ತಾನೆ, ಒಂದು ಕುಟುಂಬದಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು ಎಂಬ ಸಂದೇಶವಿದೆ. ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುವ ತಂದೆಯ ಜವಾಬ್ದಾರಿಗಳನ್ನು ಸಹ ಇದರಲ್ಲಿ ಕಾಣಬಹುದು. ಯುವ, ಪುಡ್‌ ಡೆಲವರಿ ಬಾಯ್‌ ಆಗಿಯೂ ಕೆಲಸ ಮಾಡುತ್ತಾರೆ. ಇದರೊಂದಿಗೆ ಕಾಲೇಜು ಹಿನ್ನೆಲೆಯನ್ನು ಒಳಗೊಂಡಿರುವ ಗ್ಯಾಂಗ್‌ಸ್ಟರ್‌ ಹೋರಾಟಗಳನ್ನು ಕಾಣಬಹುದು. ಜೊತೆಗೊಂದು ಪ್ರೇಮಕತೆಯ ಸುಳಿವೂ ಇಲ್ಲಿ ಸಿಗುತ್ತದೆ.

ಚಿತ್ರದಲ್ಲಿ ಯುವರಾಜ್‌ ಕುಮಾರ್‌ ತಂದೆಯಾಗಿ ಅಚ್ಯುತ್‌ ಕುಮಾರ್‌, ತಾಯಿಯಾಗಿ ಸುಧಾ ರಾಣಿ, ಪ್ರೇಯಸಿಯಾಗಿ ಸಪ್ತಮಿಗೌಡ ಕಾಣಿಸಿಕೊಂಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್‌, ಹಿತಾ ಸಿಹಿಕಹಿ ಚಂದ್ರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. Hombale Films ಬ್ಯಾನರ್‌ ಅಡಿ ವಿಜಯ್ ಕಿರಗಂದೂರ್‌ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶ್ರೀಶ ಕುದುವಳ್ಳಿ ಛಾಯಾಗ್ರಾಹಣ, ಆಶಿಕ್ ಕುಸುಗೊಳ್ಳಿ ಸಂಕಲನ, ಯೋಗಿ ಜಿ ರಾಜ್ ಕಾರ್ಯಕಾರಿ ನಿರ್ಮಾಣ, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಇದೆ. ಇದೇ ಮಾರ್ಚ್‌ 29ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here