ಇದು Prime Videoದ ವಿನೂತನ ಸರಣಿ. ಈ ‘Mission Start Ab’ ರಿಯಾಲಿಟಿ ಸರಣಿಯಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಸ್ಪರ್ಧಿಗಳಾಗಿ ಇರಲಿವೆ. ಟೀಸರ್ ಬಿಡುಗಡೆಯಾಗಿದ್ದು, ಸ್ಟ್ರೀಮಿಂಗ್ ದಿನಾಂಕವನ್ನು ಪ್ರೈಂ ವೀಡಿಯೋ ಸದ್ಯದಲ್ಲೇ ಘೋಷಿಸಲಿದೆ.
Prime Video ವಿನೂತನ ‘Mission Start Ab’ ರಿಯಾಲಿಟಿ ಸರಣಿ ಪ್ರಾರಂಭಿಸಲಿದೆ. ಇದು ಹತ್ತು ಭಾರತೀಯ ಸ್ಟಾರ್ಟ್ ಅಪ್ಗಳನ್ನು ಒಳಗೊಂಡಿದ್ದು, ಏಳು ಎಪಿಸೋಡ್ಗಳನ್ನು ಹೊಂದಿದೆ. ಈ ಸರಣಿಯನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿಯ (Principal Scientific Adviser-PSA) ಸಹಯೋಗದೊಂದಿಗೆ ಆರಂಭಿಸಲಾಗಿದೆ. ನಿನ್ನೆ (ಜುಲೈ 12) ಸರಣಿ ಘೋಷಿಸಿದ ನಂತರ ಟೀಸರ್ ಬಿಡುಗಡೆಯಾಗಿದ್ದು, ಸರಣಿಯಲ್ಲಿ ಭಾಗವಹಿಸಿ ಪೈಪೋಟಿ ನಡೆಸುವ ಹತ್ತು ಉದ್ಯಮಿಗಳ ಪರಿಚಯವೂ ಆಗಿದೆ.
ಸಮಾರಂಭದಲ್ಲಿ ಮಾತನಾಡಿದ GOI (Government of India) ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ‘ಈ ಸರಣಿಯು ದೇಶದಲ್ಲಿ ಉದಯೋನ್ಮುಖ ನವಉದ್ಯಮಿಗಳಿಗೆ ಕಲಿಕೆಯ ಅವಕಾಶಗಳನ್ನು ನೀಡುತ್ತದೆ’ ಎಂದು ಆಶಿಸಿದರು. ಪ್ರೈಮ್ ವಿಡಿಯೋ ಇಂಡಿಯಾ ನಿರ್ದೇಶಕ ಸುಶಾಂತ್ ಶ್ರೀರಾಮ್ ಅವರು ‘ಈ ಸಹಯೋಗವು ಮತ್ತೊಂದು ಮೈಲಿಗಲ್ಲಾಗಲಿದೆ. ಜೊತೆಗೆ ರಾಷ್ಟ್ರದ ವೀಕ್ಷಕರಿಗೆ ಈ ವೇದಿಕೆಯು ಉತ್ತಮ ಅವಕಾಶವನ್ನು ಕಲ್ಪಸುತ್ತದೆ. ಉದ್ಯಮಿಗಳು ಮತ್ತು ಉದ್ಯಮ ಸೃಷ್ಟಿಸುವವರನ್ನು ಸಬಲೀಕರಣಗೊಳಿಸಲು ಈ ವೇದಿಕೆ ಹೊಸ ಆಯಾಮ ನೀಡಲಿದೆ’ ಎಂದಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಬಾಲಿವುಡ್ ನಟಿ ಅಲಿಯಾ ಭಟ್, ದೇಶದಲ್ಲಿ ಸ್ಟಾರ್ಟ್ ಅಪ್ಗಳನ್ನು ಸುಧಾರಿಸಲು ಆಸಕ್ತಿ ತೋರಿಸಿದ ಮತ್ತು PSA ಯು ಭಾರತ ಸರ್ಕಾರದೊಂದಿಗೆ Prime Videoಯು ಸಹಕರಿಸಿದ ನಡೆಯನ್ನು ಶ್ಲಾಘಿಸಿದರು. ಏಳು ಎಪಿಸೋಡ್ಗಳನ್ನು ಒಳಗೊಂಡ ಸರಣಿಯು ದೇಶದೆಲ್ಲೆಡೆ ಆಯ್ಕೆ ಮಾಡಿದ 10 ಸ್ಟಾರ್ಟ್-ಅಪ್ಗಳನ್ನು ಒಂದು ಕಡೆ ಸೇರಿಸುತ್ತದೆ. ‘Mission Start Ab’ ಸರಣಿ ಭಾರತದ ಸಣ್ಣ ಹೂಡಿಕೆದಾರರು ಎದುರಿಸಿದ ಸಮಸ್ಯೆಗಳು ಮತ್ತು ತಮ್ಮ ಸ್ಟಾರ್ಟ್-ಅಪ್ಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಸಿಗುವ ಸ್ಪೂರ್ತಿದಾಯಕ ಕಥೆಗಳನ್ನು ಬಿತ್ತರಿಸುವ ಒಂದು ಉತ್ತಮ ವೇದಿಕೆ ಎನ್ನಲಾಗಿದೆ. ಸರಣಿಯ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.
announcing #MissionStartAbOnPrime a unique series in a collaboration with the Office of the Principal Scientific Adviser to the Government of India pic.twitter.com/EteWOXD6qS
— prime video IN (@PrimeVideoIN) July 12, 2023