‘ಗೋಣಿಚೀಲ’, ‘ಜೋಡಿ ಕುದುರೆ’ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ನವನ್ ಶ್ರೀನಿವಾಸ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ಕಂಬ್ಳಿಹುಳ’. ಅಂಜನ್‌ ನಾಗೇಂದ್ರ ಮತ್ತು ಅಶ್ವತಾ ಹೆಗ್ಡೆ ಮುಖ್ಯಪಾತ್ರದಲ್ಲಿರುವ ಚಿತ್ರದ ಹಾಡಿನ ಗ್ಲಿಮ್ಸ್‌ ಒಂದನ್ನು ನಟ ಶ್ರೀಮುರಳಿ ರಿಲೀಸ್‌ ಮಾಡಿದ್ದಾರೆ.

ಕಂಬ್ಳಿಹುಳ – ಸ್ಯಾಂಡಲ್ ವುಡ್‌ನಲ್ಲಿ ಹೀಗೊಂದು ವಿಭಿನ್ನ ಬಗೆಯ ಶೀರ್ಷಿಕೆಯ ಸಿನಿಮಾ ಸಿದ್ಧವಾಗುತ್ತಿದೆ. ಒಂದಷ್ಟು ರಂಗಭೂಮಿ ಕಲಾವಿದರು ಸೇರಿ ರೂಪಿಸುತ್ತಿರುವ ಈ ಸಿನಿಮಾದ ಫಸ್ಟ್ ಝಲಕ್ ಅನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ‘ಗೋಣಿಚೀಲ’, ‘ಜೋಡಿ ಕುದುರೆ’ ಕಿರುಚಿತ್ರಗಳನ್ನು ಮಾಡಿ ಪ್ರಶಂಸೆ ಗಳಿಸಿರುವ ನವನ್ ಶ್ರೀನಿವಾಸ್ ‘ಕಂಬ್ಳಿಹುಳ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಂಗಭೂಮಿ ಮೂಲದ ಅಂಜನ್ ನಾಗೇಂದ್ರ ನಾಯಕನಾಗಿ, ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

https://youtu.be/LdK6I1EHHgc

ನೈಜ ಘಟನೆಯಾಧಾರಿತ ‘ಕಂಬ್ಳಿಹುಳ’ ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸತೀಶ್ ರಾಜೇಂದ್ರನ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಮಲೆನಾಡಿನ ಸುಂದರ ದೃಶ್ಯಗಳನ್ನು ಸೆರೆಹಿಡಿದರೆ, ಜಿತೇಂದ್ರ ನಾಯಕ್ ಹಾಗೂ ರಾಘವೇಂದ್ರ ಸಂಕಲನ, ಹೊಸ ಪ್ರತಿಭೆ ಶಿವಪ್ರಸಾದ್ ಮ್ಯೂಸಿಕ್ ಸಿನಿಮಾಕ್ಕಿದೆ. ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here