ZEE5ನ ಯಶಸ್ವೀ ಸರಣಿ ‘ಅಭಯ್’ ಸೀಸನ್ 3ನಲ್ಲಿ ವಿಜಯ್ ರಾಝ್, ರಾಹುಲ್ ದೇವ್ ಮತ್ತು ವಿದ್ಯಾ ಮಾಲ್ವಾಡೆ ನಟಿಸಲಿದ್ಧಾರೆ. ಕೆನ್ ಘೋಷ್ ನಿರ್ದೇಶನದ ಸರಣಿಯಲ್ಲಿ ಕುನಾಲ್ ಖೇಮು ಅವರ ‘ಅಭಯ್ ಪ್ರತಾಪ್ ಸಿಂಗ್’ ಪಾತ್ರ ಬಹು ಜನಪ್ರಿಯವಾಗಿದೆ.

ZEE5ನ ಒರಿಜಿನಲ್ ಸೀರೀಸ್ ‘ಅಭಯ್’ ದೊಡ್ಡ ವೀಕ್ಷಕ ಬಳಗ ಹೊಂದಿದೆ. ಸರಣಿಯಲ್ಲಿನ ಕುನಾಲ್‌ ಖೇಮು ನಿರ್ವಹಿಸಿರುವ ಇನ್ವೆಸ್ಟಿಗೇಟಿಂಗ್‌ ‘ಅಭಯ್‌ ಪ್ರತಾಪ್‌ ಸಿಂಗ್‌’ ಪಾತ್ರವನ್ನು ಜನರು ಮೆಚ್ಚಿದ್ದಾರೆ. ಕಳೆದೆರೆಡು ಸೀಸನ್‌ಗಳ ಯಶಸ್ವೀ ಪ್ರದರ್ಶನದ ನಂತರ ಇದೀಗ ಮೂರನೇ ಸೀಸನ್‌ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಈ ಬಾರಿ ಪ್ರತಿಭಾವಂತ ಕಲಾವಿದರಾದ ವಿಜಯ್ ರಾಝ್, ರಾಹುಲ್ ದೇವ್ ಮತ್ತು ವಿದ್ಯಾ ಮಾಲ್ವಾಡೆ ತಾರಾಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಇವರ ಪಾತ್ರಗಳೊಂದಿಗೆ ಕೆನ್‌ ಘೋಷ್‌ ನಿರ್ದೇಶನದ ಈ ಸರಣಿ ಮತ್ತಷ್ಟು ರಂಗೇರಲಿದೆ. ಉಳಿದಂತೆ ಕಳೆದೆರೆಡು ಸೀಸನ್‌ಗಳಲ್ಲಿ ನಟಿಸಿದ್ದ ಆಶಾ ನೇಗಿ, ನಿಧಿ ಸಿಂಗ್‌, ರಿತುರಾಗ್‌ ಸಿಂಗ್‌, ಎಲ್ನಾಝ್‌ ನೌರೋಝಿ ಮೂರನೇ ಸೀಸನ್‌ನಲ್ಲೂ ಮುಂದುವರೆಯಲಿದ್ದಾರೆ.

ನಟ ವಿಜಯ್‌ ರಾಝ್‌ ಮಾತನಾಡಿ, “ಕೆನ್‌ ಮತ್ತು ಕುನಾಲ್‌ ಜೋಡಿಯ ಯಶಸ್ವೀ ಸರಣಿಯ ಭಾಗವಾಗಿರುವುದು ಥ್ರಿಲ್‌ ನೀಡಿದೆ. ಹಿಂದೆ ನೋಡಿರದಂಥ ಪಾತ್ರದಲ್ಲಿ ವೀಕ್ಷಕರು ಇಲ್ಲಿ ನನ್ನನ್ನು ನೋಡಲಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ರಿವೀಲ್‌ ಮಾಡುವಂತಿಲ್ಲ. ಅಭಯ್‌ ಪಾತ್ರದೊಂದಿಗಿನ ತೀವ್ರ ಹಣಾಹಣಿಗೆ ನನ್ನ ಪಾತ್ರ ಸಾಕ್ಷಿಯಾಗಲಿದೆ” ಎಂದಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ಪ್ರತಿಭಾವಂತ ನಟ ರಾಹುಲ್‌ ದೇವ್‌ ಕೂಡ ಸರಣಿಯಲ್ಲಿ ನಟಿಸುತ್ತಿರುವ ಕುರಿತು ಎಕ್ಸೈಟ್‌ ಆಗಿದ್ದಾರೆ. “ಅಭಯ್‌ ಸರಣಿಗೆ ತನ್ನದೇ ಆದ ಲಾಯಲ್‌ ಆದಂತಹ ನೋಡುಗ ಬಳಗವಿದೆ. ನಿರ್ದೇಶಕ ಕೆನ್‌ ಅಗಾಧ ವಿಶ್ಯುಯೆಲ್‌ ಸೆನ್ಸ್‌ ಇರುವಂತಹ ನಿರ್ದೇಶಕ. ಈ ಸರಣಿಯಲ್ಲಿ ನಟಿಸುತ್ತಿರುವ ಕುರಿತು ಹೆಮ್ಮೆಯಿದ್ದು, ವೀಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂದು ಈಗಲೇ ಕುತೂಹಲಿಯಾಗಿದ್ದೇನೆ” ಎನ್ನುತ್ತಾರೆ ರಾಹುಲ್‌ ದೇವ್‌.

‘ಅಭಯ್‌ 2’ ಟ್ರೈಲರ್‌

LEAVE A REPLY

Connect with

Please enter your comment!
Please enter your name here