ನಾಗೇಶ್‌ ಕುಕನೂರ್‌ ನಿರ್ದೇಶನದಲ್ಲಿ ಕೀರ್ತಿ ಸುರೇಶ್‌ ನಟಿಸಿರುವ ನಾಯಕಿಪ್ರಧಾನ ಸಿನಿಮಾ ‘ಗುಡ್‌ಲಕ್‌ ಸಖಿ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಜಗಪತಿ ಬಾಬು, ಆಧಿ ಪಿನಿಸೆಟ್ಟಿ, ರಾಹುಲ್‌ ರಾಮಕೃಷ್ಣ ನಟಿಸಿರುವ ಚಿತ್ರ ಇದೇ 28ರಂದು ತೆರೆಗೆ ಬರುತ್ತಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ನಟನೆಯ ನಾಯಕಿಪ್ರಧಾನ ಸಿನಿಮಾ ‘ಗುಡ್‌ಲಕ್‌ ಸಖಿ’ ತೆಲುಗು ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ನಟಿ ಕೀರ್ತಿ ಸುರೇಶ್‌, “What’s our habit? Winning! Here’s the entertaining trailer of #GoodLuckSakhi.” ಎನ್ನುವ ಒಕ್ಕಣಿಯೊಂದಿಗೆ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಟ್ರೈಲರ್‌ ಹಂಚಿಕೊಂಡಿದ್ದಾರೆ. ವಿಶಿಷ್ಟ ಶೀರ್ಷಿಕೆಯ ‘ಗುಡ್‌ಲಕ್‌ ಸಖಿ’ ಕ್ರೀಡಾಪ್ರಧಾನ ರೊಮ್ಯಾಂಟಿಕ್‌ ಡ್ರಾಮಾ ಸಿನಿಮಾ. ಆದಿ ಪಿನಿಸೆಟ್ಟಿ ಮತ್ತು ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯ ಯುವತಿಯೊಬ್ಬಳು ಶೂಟರ್‌ ಆಗುವ ಕಥಾನಕ. ತೆರೆಯ ಮೇಲೆ ಜಗಪತಿ ಬಾಬು ನಾಯಕನಟಿಗೆ ಮೆಂಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂಲ ತೆಲುಗು ಜೊತೆ ತಮಿಳು ಮತ್ತು ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜನೆ, ಚಿರಂತನ್‌ ಛಾಯಾಗ್ರಹಣ ಚಿತ್ರಕ್ಕಿದೆ. ಕೀರ್ತಿ ಸುರೇಶ್‌ ‘ಸರ್ಕಾರು ವಾರಿ ಪಾಟ’ ತೆಲುಗು ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ನಟಿಸಿದ್ದು, ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ‘ಭೋಳಾ ಶಂಕರ್‌’ ತೆಲುಗು ಚಿತ್ರದಲ್ಲಿ ಅವರು ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Previous articleವಿಕ್ರಂ – ಧ್ರುವ ‘ಮಹಾನ್‌’ ಪ್ರೈಮ್‌ನಲ್ಲಿ ಫೆ.10ಕ್ಕೆ; ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶನದ ಸಿನಿಮಾ
Next articleಕಳೆದುಹೋಗಿಯೇ ಕಂಡುಕೊಳ್ಳುವ ಚಡಪಡಿಕೆಯ ಕುಂಭಮೇಳ

LEAVE A REPLY

Connect with

Please enter your comment!
Please enter your name here