ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ರೊಮ್ಯಾಂಟಿಕ್ ಲವ್‌ ಸಿನಿಮಾ 2012ರ ಸಕ್ರಾಂತಿಗೆ ತೆರೆಕಾಣಲಿದೆ. ನಿರ್ಮಾಪಕರು ತಮ್ಮ ಚಿತ್ರದ ನಾಯಕಿ ಪೂಜಾ ಹುಟ್ಟುಹಬ್ಬವಾದ ಇಂದು ನೂತನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ತಮ್ಮ ಚಿತ್ರದ ನಾಯಕಿ ಪೂಜಾ ಹೆಗ್ಡೆ ಅವರ 31ನೇ ಹುಟ್ಟುಹಬ್ಬದ ಅಂಗವಾಗಿ ‘ರಾಧೆ ಶ್ಯಾಮ್‌’ ಚಿತ್ರತಂಡ ನೂತನ ಪೋಸ್ಟರ್ ಬಿಡುಗಡೆ ಮಾಡಿದೆ. “ಸಿನಿಪ್ರಿಯರ ಹೃದಯದ ರಾಣಿ! ನಮ್ಮ ಚಿತ್ರದ ‘ಪ್ರೇರಣಾ’ಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಚಿತ್ರದ ನಿರ್ಮಾಣ ಸಂಸ್ಥೆ UV ಕ್ರಿಯೆಷನ್ಸ್‌ ಟ್ವೀಟ್ ಮಾಡಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ರೊಮ್ಯಾಂಟಿಕ್ ಸಿನಿಮಾ ‘ರಾಧೆ ಶ್ಯಾಮ್‌’ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. 2022ರ ಜನವರಿಯಲ್ಲಿ ಸಕ್ರಾಂತಿಗೆ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಘೋಷಣೆಯೂ ಆಗಿದ್ದು, ಇದೀಗ ಚಿತ್ರದ ಹೊಸ ಪೋಸ್ಟರ್‌ ಗಮನಸೆಳೆಯುತ್ತಿದೆ.

‘ಜಿಲ್‌’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ಚಿತ್ರದೊಂದಿಗೆ ವರ್ಷಗಳ ನಂತರ ಪ್ರಭಾಶ್ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಮತ್ತು ಹಿಂದಿ ಭಾ‍ಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಇನ್ನು ಪೂಜಾ ಹೆಗ್ಡೆ ಅವರ ‘ಮೋಸ್ಟ್‌ ಎಲಿಜಬಲ್ ಬ್ಯಾಚುಲರ್‌’ ತೆಲುಗು ಸಿನಿಮಾ ಈ ವಾರ ತೆರೆಕಾಣುತ್ತಿದೆ. ಅಖಿಲ್ ಅಕ್ಕಿನೇನಿ ಚಿತ್ರದ ಹೀರೋ. ಸದ್ಯ ವಿಜಯ್ ಹೀರೋ ಆಗಿ ನಟಿಸುತ್ತಿರುವ ‘ಬೀಸ್ಟ್‌’ ತಮಿಳು ಚಿತ್ರದಲ್ಲಿ ಪೂಜಾ ಬ್ಯುಸಿಯಾಗಿದ್ದಾರೆ. 2012ರಲ್ಲಿ ಮಿಸ್ಕಿನ್ ನಿರ್ದೇಶನದ ‘ಮೂಗಮೂಡಿ’ ತಮಿಳು ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಆರಂಭವಾಗಿತ್ತು. ಇದೀಗ ಒಂಬತ್ತು ವರ್ಷಗಳ ನಂತರ ‘ಬೀಸ್ಟ್‌’ ಚಿತ್ರದೊಂದಿಗೆ ಕಾಲಿವುಡ್‌ಗೆ ಮರಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here