ಕಾರ್ತಿಕೇಯ ನಟನೆಯ ‘ರಾಜಾ ವಿಕ್ರಮಾರ್ಕ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಶ್ರೀ ಸರಿಪಳ್ಳಿ ನಿರ್ದೇಶನದ ಸ್ಪೈ ಥ್ರಿಲ್ಲರ್ ಇದೇ ತಿಂಗಳ 12ಕ್ಕೆ ತೆರೆಕಾಣಲಿದೆ.

ಶ್ರೀ ಸರಿಪಳ್ಳಿ ನಿರ್ದೇಶನದಲ್ಲಿ ಕಾರ್ತಿಕೇಯ ನಟಿಸಿರುವ ‘ರಾಜಾ ವಿಕ್ರಮಾರ್ಕ’ ಸ್ಪೈ ಥ್ರಿಲ್ಲರ್‌ ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ನಿರ್ದೇಶಕರು ಇದೊಂದು ಥ್ರಿಲ್ಲರ್‌ ಎಂದು ಹೇಳಿದ್ದರೂ ಟ್ರೈಲರ್ ನೋಡಿದರೆ ಈ ಸಿನಿಮಾ ಆಕ್ಷನ್‌, ಕಾಮಿಡಿ, ರೊಮ್ಯಾನ್ಸ್‌ ಎಲ್ಲದರ ಮಿಶ್ರಣದಂತಿದೆ. ಚಿತ್ರದಲ್ಲಿ ನಟ ಕಾರ್ತಿಕೇಯ NIA ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ಸೇರಿದ ಆರಂಭದಲ್ಲೇ ದೊಡ್ಡ ಕೇಸೊಂದನ್ನು ನಿಭಾಯಿಸುವ ಜವಾಬ್ದಾರಿ ಹೀರೋ ಹೆಗಲಿಗೇರುತ್ತದೆ. ಆತನ ಬದುಕಿಗೆ ತಿರುವು ನೋಡುವ ಹಲವು ಆಕಸ್ಮಿಕಗಳು ಇಲ್ಲಿ ಘಟಿಸುತ್ತವೆ. ಗೃಹಮಂತ್ರಿ ರಕ್ಷಣೆಯ ಹೊಣೆಗಾರಿಕೆಯ ಜೊತೆ ಅವರ ಪುತ್ರಿಯನ್ನೇ ಪ್ರೀತಿಸುವ ಸಂದರ್ಭ ಸೃಷ್ಟಿಯಾಗುತ್ತದೆ. ಹೀಗೆ, ಆಕ್ಷನ್‌ – ಥ್ರಿಲ್ಲರ್ ಜೊತೆ ಲವ್‌ಸ್ಟೋರಿಗೂ ಇಲ್ಲಿ ಜಾಗವಿದೆ ಎನ್ನುತ್ತಾರೆ ನಿರ್ದೇಶಕರು. ತಾನ್ಯಾ ರವಿಚಂದ್ರನ್‌ ನಾಯಕಿಯಾಗಿ ನಟಿಸಿದ್ದು, ಸುಧಾಕರ್ ಕೋಮುಕುಲ ಮತ್ತು ಸಾಯಿಕುಮಾರ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ತಿಂಗಳ 12ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here