ಖ್ಯಾತ ಚಿತ್ರನಿರ್ದೇಶಕ ರಾಜಮೌಳಿ ದೊಡ್ಡ ಯೋಜನೆಯೊಂದಿಗೆ ಮರಳಿದ್ದಾರೆ. ಅವರ ನಿರ್ಮಾಣದಲ್ಲಿ ‘ಭಾರತೀಯ ಚಿತ್ರರಂಗದ ಪಿತಾಮಹ’ ಎಂದೇ ಕರೆಯಲ್ಪಡುವ ದಾದಾಸಾಹೇಬ್ ಫಾಲ್ಕೆ ಬಯೋಪಿಕ್‌ ಸಿನಿಮಾ ತಯಾರಾಗಲಿದೆ. ನಿತಿನ್‌ ಕಕ್ಕರ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

‘ಭಾರತೀಯ ಚಿತ್ರರಂಗದ ಪಿತಾಮಹ’ ದಾದಾಸಾಹೇಬ್ ಫಾಲ್ಕೆ ಅವರ ಬಯೋಪಿಕ್ ಸಿನಿಮಾ ತಯಾರಾಗಲಿದೆ. ಖ್ಯಾತ ಚಿತ್ರನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಚಿತ್ರ ನಿರ್ಮಿಸಲಿರುವ ಚಿತ್ರಕ್ಕೆ ‘ಮೇಡ್‌ ಇನ್‌ ಇಂಡಿಯಾ’ ಎಂದು ನಾಮಕರಣವಾಗಿದೆ. ನಿತಿನ್‌ ಕಕ್ಕರ್‌ ನಿರ್ದೇಶಿಸಲಿರುವ ಚಿತ್ರದ ಅನೌನ್ಸ್‌ಮೆಂಟ್‌ ಟೀಸರ್‌ ಬಿಡುಗಡೆಯಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಜಮೌಳಿ, ”ಮೊದಲು ನಾನು ಈ ನಿರೂಪಣೆಯನ್ನು ಕೇಳಿದಾಗ ಜೀವನಚರಿತ್ರೆ ಮಾಡುವುದು ಕಠಿಣ ಎನಿಸಿತು. ಆದರೆ ಭಾರತೀಯ ಸಿನಿಮಾ ಪಿತಾಮಹನ ಬಗ್ಗೆ ಸಿನಿಮಾ ಮಾಡುವ ಅವಕಾಶ ತುಂಬಾ ದೊಡ್ಡದು. ನಮ್ಮ ಹುಡುಗರು ಅದಕ್ಕೆ ಸಿದ್ಧರಾಗಿದ್ದಾರೆ. ನಾವು ಹೆಮ್ಮೆಯಿಂದ ‘ಮೇಡ್ ಇನ್ ಇಂಡಿಯಾ’ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದಿದ್ದಾರೆ. ಹಿಂದಿ, ಮರಾಠಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನುವ ಮಾಹಿತಿ ಟೀಸರ್‌ನಲ್ಲಿದೆ. ರಾಜಮೌಳಿ ಈ ಚಿತ್ರವನ್ನು ತಮ್ಮ ಪುತ್ರ ಎಸ್‌ ಎಸ್ ಕಾರ್ತಿಕೇಯ ಅವರ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.

‘ಭಾರತೀಯ ಸಿನಿಮಾದ ಪಿತಾಮಹ’ ಎಂದು ಕರೆಯಲ್ಪಡುವ ದಾದಾಸಾಹೇಬ್ ಫಾಲ್ಕೆ ಅವರು 1913ರಲ್ಲಿ ‘ರಾಜಾ ಹರಿಶ್ಚಂದ್ರ’ ಶೀರ್ಷಿಕೆಯ ಮೊದಲ ಪೂರ್ಣ ಪ್ರಮಾಣದ ಭಾರತೀಯ ಚಲನಚಿತ್ರ ನಿರ್ಮಿಸಿದ್ದರು. ಇಂದಿನ ಮಹಾರಾಷ್ಟ್ರದ ತ್ರಯಂಬಕ್‌ನಲ್ಲಿ ಜನಿಸಿದ ಇವರು ಚಲನಚಿತ್ರ ನಿರ್ಮಾಣ, ತಂತ್ರಜ್ಞಾನ ಕಲಿಕೆಗೆ ಲಂಡನ್‌ಗೆ ತೆರಳಿದ್ದರು. ಮುಂದೆ ಭಾರತಕ್ಕೆ ಮರಳಿದ ನಂತರ ಅವರಂದ ಹಲವು ದಾಖಲೆಗಳು ಸೃಷ್ಟಿಯಾದವು. 19 ವರ್ಷಗಳ ವೃತ್ತಿಜೀವನದಲ್ಲಿ ಫಾಲ್ಕೆ 95 ಚಲನಚಿತ್ರಗಳು ಮತ್ತು 27 ಕಿರುಚಿತ್ರಗಳನ್ನು ರೂಪಿಸಿದ್ದಾರೆ. ‘ಮೇಡ್ ಇನ್ ಇಂಡಿಯಾ’ ಚಿತ್ರದ ತಾರಾಗಣ ಮತ್ತು ಇತರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ರಾಜಮೌಳಿ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here