ರಜನೀಕಾಂತ್‌ ಅವರ ಬಹುನಿರೀಕ್ಷಿತ ‘ಜೈಲರ್‌’ ತಮಿಳು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ. ಶಿವರಾಜಕುಮಾರ್‌, ಮೋಹನ್‌ ಲಾಲ್‌, ಜಾಕಿಶ್ರಾಫ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಆಗಸ್ಟ್‌ 10ರಂದು ತೆರೆಕಾಣಲಿದೆ.

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ, ರಜನೀಕಾಂತ್‌ ಅಭಿನಯದ ‘ಜೈಲರ್‌’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹೀರೋ ರಜನಿ, ಹಿರೋಯಿನ್‌ ತಮನ್ನಾ ಭಾಟಿಯಾ, ನಿರ್ದೇಶಕ ನೆಲ್ಸನ್‌ ಅವರು ಚಿತ್ರತಂಡದೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಸಿನಿಮಾ ನಿರ್ಮಿಸಿರುವ Sun Pictures ಈ ಸಂಭ್ರಮದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಬೃಹತ್‌ ಕೇಕ್‌ ಮೇಲೆ ‘Jailer shooting wrapped’ ಎಂದು ಬರೆದಿದ್ದು, ರಜನಿ ಕೇಕ್‌ ಕತ್ತರಿಸಿ ನಿರ್ದೇಶಕರಿಗೆ ಶುಭಾಶಯ ಕೋರಿದರು. ‘It’s a wrap for #Jailer! Theatre la sandhippom #JailerFromAug10’ ಎಂದಿದೆ Sun Pictures. ಚಿತ್ರದಲ್ಲಿ ಕನ್ನಡ ನಟ ಶಿವರಾಜಕುಮಾರ್‌, ಮೋಹನ್‌ ಲಾಲ್‌, ಜಾಕಿ ಶ್ರಾಫ್‌, ರಮ್ಯಕೃಷ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಜನೀಕಾಂತ್‌ ಮತ್ತು ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಜೋಡಿಯ ಮೊದಲ ತಮಿಳು ಚಿತ್ರವಿದು. ಆಗಸ್ಟ್‌ 10ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here