ಸ್ಟಾರ್‌ ಸುವರ್ಣ ವಾಹಿನಿ ಮತ್ತೊಂದು ‘ಸುವರ್ಣ ಸಂಭ್ರಮ’ಕ್ಕೆ ಸಜ್ಜಾಗಿದೆ. ಈ ಬಾರಿ ‘ಕಥೆಯೊಂದು ಶುರುವಾಗಿದೆ’ ಮತ್ತು ‘ನಮ್ಮ ಲಚ್ಚಿ’ ಧಾರಾವಾಹಿ ಕಲಾವಿದರು ಜೊತೆಗೂಡುತ್ತಿದ್ದಾರೆ. ಜೂನ್‌ 4ರಂದು ಸಂಜೆ 6ಕ್ಕೆ ಈ ಕಾರ್ಯಕ್ರಮ ಮೂಡಿಬರಲಿದೆ.

ಈಗಾಗಲೇ ನೂರು ಸಂಚಿಕೆಗಳನ್ನು ಪೂರೈಸಿರುವ ಸ್ಟಾರ್‌ ಸುವರ್ಣ ವಾಹಿನಿಯ ‘ಕಥೆಯೊಂದು ಶುರುವಾಗಿದೆ’ ಮತ್ತು ‘ನಮ್ಮ ಲಚ್ಚಿ’ ಸೀರಿಯಲ್‌ಗಳು ವಿಶೇಷ ರೀತಿಯಲ್ಲಿ ವೀಕ್ಷಕರಿಗೆ ಎದುರುಗೊಳ್ಳಲಿವೆ. ಈ ಎರಡೂ ಧಾರಾವಾಹಿಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರಿ ವೀಕ್ಷಕರನ್ನು ರಂಜಿಸಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಖ್ಯಾತ ನಿರೂಪಕಿ ಅನುಪಮ ಗೌಡ ಅವರದು. ಕೃತಿ ಹಾಗು ಯುವರಾಜ್ ಜೋಡಿ ಡ್ಯಾನ್ಸ್‌ ಮಾಡಲಿದ್ದು, ತಾಯಿಯನ್ನು ಕಳೆದುಕೊಂಡಿರುವ ಲಚ್ಚಿಗೆ ಈ ವೇದಿಕೆಯಲ್ಲಿ ತಾಯಿಯ ಅಕ್ಕರೆ ದೊರಕಲಿದೆ. ಪುಷ್ಪ, ಶಾಂತಲಾ ಹಾಗು ಮಾತಂಗಿ ಜೊತೆಜೊತೆಗೆ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಆಟಗಳೂ ಇರಲಿವೆ.

ಎರಡು ಧಾರಾವಾಹಿಗಳ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಒಂದೇ ವೇದಿಕೆಯಲ್ಲಿ ಮೋಜು ಮಸ್ತಿಯೊಂದಿಗೆ ಕುಣಿದು ಕುಪ್ಪಳಿಸಲಿದ್ದಾರೆ. ಕಲಾವಿದರ ಮನದಾಳದ ಮಾತುಗಳಿಗೆ ವೇದಿಕೆ ಸಾಕ್ಷಿಯಾಗಲಿದೆ. ಮೊದಲ ಬಾರಿ ವಿಜಯ್ ಸೂರ್ಯ ಹಾಗು ನೇಹಾ ಗೌಡ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಸುವರ್ಣ ಸಂಭ್ರಮ’ ನಮ್ಮ ಲಚ್ಚಿ ಜೊತೆ ಕಥೆಯೊಂದು ಶುರುವಾಗಿದೆ ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

Previous articleರಜನೀಕಾಂತ್‌ ‘ಜೈಲರ್‌’ ಶೂಟಿಂಗ್‌ ಪೂರ್ಣ | ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ
Next articleಊರ್ಮಿಳಾ, ಬ್ರಾಹ್ಮಿನ್ಸ್‌ ಕೆಫೆ & ಸಖತ್‌ ಜೋಡಿ | ಸಿರಿಕನ್ನಡ ನೂತನ ಶೋಗಳು

LEAVE A REPLY

Connect with

Please enter your comment!
Please enter your name here