ತಾರಾ ದಂಪತಿ ರಣಬೀರ್‌ – ಅಲಿಯಾ ಪೋಷಕರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್‌ ಸೆಷನ್‌ ಸಂದರ್ಭದ ಫೋಟೊವೊಂದನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಅಲಿಯಾ, “Our baby…. coming soon,” ಎಂದು ಸಂತಸ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ಸ್ಟಾರ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಪ್ರಿಲ್‌ನಲ್ಲಿ ರಣಬೀರ್‌ (39 ವರ್ಷ) ಮತ್ತು ಅಲಿಯಾ (29 ವರ್ಷ) ಮದುವೆ ನೆರವೇರಿತ್ತು. ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್‌ ಸೆಷನ್‌ ಸಂದರ್ಭದ ಫೋಟೊವೊಂದನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಅಲಿಯಾ, “Our baby…. coming soon,” ಎಂದು ಸಂತಸ ಹಂಚಿಕೊಂಡಿದ್ದಾರೆ. ಇನ್ನು ಮೊದಲ ಬಾರಿ ಈ ದಂಪತಿ ಜೊತೆಯಾಗಿ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್‌ 9ರಂದು ತೆರೆಕಾಣುತ್ತಿದೆ. ಮೊನ್ನೆ ‘ಶಮ್ಶೇರಾ’ ಸಿನಿಮಾದ ಟ್ರೈಲರ್‌ ರಿಲೀಸ್‌ ಸಂದರ್ಭದಲ್ಲಿ ನಟ ರಣಬೀರ್‌ ಕಪೂರ್‌, “ಇದು ನನಗೆ ಅದ್ಭುತ ವರ್ಷ. ಈ ವರ್ಷ ನನ್ನ ವಿವಾಹ ನೆರವೇರಿತು. ನನ್ನ ದೊಡ್ಡ ಸಿನಿಮಾಗಳು ತೆರೆಕಾಣುತ್ತಿವೆ. ಬದುಕಿನ ಖುಷಿಯ ಕ್ಷಣಗಳು ಸಂಭವಿಸುತ್ತಿವೆ” ಎಂದಿದ್ದರು. ಇನ್ನು ನಟಿ ಅಲಿಯಾ ಸದ್ಯ ‘Heart of Stone’ ಹಾಲಿವುಡ್‌ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ‘ರಾಖಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಮತ್ತು ‘Darlings’ ಹಿಂದಿ ಚಿತ್ರಗಳು ಪೋಸ್ಟ್‌ ಪ್ರೊಡಕ್ಷನ್‌ನಲ್ಲಿವೆ. ‘Darlings’ ಚಿತ್ರದೊಂದಿಗೆ ಅವರು ನಿರ್ಮಾಪಕಿಯಾಗುತ್ತಿದ್ದಾರೆ.

Previous articleಸುಳಿಯೊಳಗೊಂದು ಒಳಸುಳಿ, ಅದರೊಳಗೆ ಇನ್ನೊಂದು ಸುಳಿ, ಅದರೊಳಗೆ ಮತ್ತೊಂದು…
Next articleನವೀನ ತಂತ್ರಜ್ಞಾನದೊಂದಿಗೆ ‘ಭಾಗ್ಯವಂತರು’; ಜುಲೈ 8ರಂದು ತೆರೆಗೆ

LEAVE A REPLY

Connect with

Please enter your comment!
Please enter your name here