ನಟ ರಾಜ್‌ಪಾಲ್‌ ಯಾದವ್‌ ಅವರು ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ‘ಅರ್ಧ್‌’ ಹಿಂದಿ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ರುಬಿನಾ ದಿಲೈಕ್‌, ಹಿತೇನ್‌ ತೇಜ್‌ವಾನಿ, ಕುಲಭೂಷಣ್‌ ಕರ್‌ಬಂಧ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ OTTಯಲ್ಲಿ ಸ್ಟ್ರೀಮ್‌ ಆಗಲಿದೆ.

“Presenting to you the first look of my next film ARDH!” ಎನ್ನುವ ಸಂದೇಶದೊಂದಿಗೆ ನಟ ರಾಜ್‌ಪಾಲ್‌ ಯಾದವ್‌ ತಮ್ಮ ‘ಅರ್ಧ್‌’ ಹಿಂದಿ ಸಿನಿಮಾದ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಸೀರೆಯುಟ್ಟು, ಹೂಮುಡಿದ ಫೋಟೊ ಇದ್ದು ರಾಜ್‌ಪಾಲ್‌ ಈ ಚಿತ್ರದಲ್ಲಿ ಮಂಗಳಮುಖಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಸೇರಬೇಕೆಂದು ಮುಂಬಯಿಗೆ ಬರುವ ಮಂಗಳಮುಖಿಯಾಗಿ ರಾಜ್‌ಪಾಲ್‌ ಕಾಣಿಸಿಕೊಳ್ಳುತ್ತಿದ್ದು, ರುಬಿನಾ ಮತ್ತು ಹಿತೇನ್‌ ಅವರ ಹಿತೈಷಿಗಳಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸಂಗೀತ ಸಂಯೋಜಕ ಪಲೇಶ್‌ ಮಚ್ಚಲ್‌ ಚಿತ್ರನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಚಿತ್ರಕಥೆಯೂ ಅವರದೆ. ನಟಿ ರುಬಿನಾ ದಿಲೈಕ್‌ ಪಾತ್ರಕ್ಕೂ ಚಿತ್ರದಲ್ಲಿ ಹೆಚ್ಚು ಸ್ಕೋಪ್‌ ಇದೆ. ಅವರು ಬಿಗ್‌ ಬಾಸ್‌ 14ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ನೋಡಿ ನಟಿಯನ್ನು ಆಯ್ಕೆ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕ ಪಲೇಶ್‌. ಈ ಸಿನಿಮಾ ಸಿದ್ಧವಾಗಿದ್ದು OTT ಯಲ್ಲಿ ಸ್ಟ್ರೀಮ್‌ ಆಗಲಿದೆ. ಯಾವ ಸ್ಟ್ರೀಮಿಂಗ್‌ ಸರ್ವೀಸಸ್‌ನಲ್ಲಿ ಸಿಗಲಿದೆ ಎನ್ನುವ ಬಗ್ಗೆ ನಿರ್ಮಾಪಕರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ.

LEAVE A REPLY

Connect with

Please enter your comment!
Please enter your name here