ಪವನ್‌ ಕಲ್ಯಾಣ್‌ ಅಭಿನಯದ ‘ಭೀಮ್ಲಾ ನಾಯಕ್‌’ ಸಿನಿಮಾ ಇಂದು ತೆರೆಕಾಣುತ್ತಿದೆ. ನಟ ರಾಮ್‌ ಚರಣ್‌ ತೇಜಾ ತಮ್ಮ ತಂದೆ ಚಿರಂಜೀವಿ ಮತ್ತು ಚಿಕ್ಕಪ್ಪ ಪವನ್‌ ಕಲ್ಯಾಣ್‌ ಮಾತುಕತೆಗೆ ವೀಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಭೀಮ್ಲಾ ನಾಯಕ್‌’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಟ ರಾಮ್‌ ಚರಣ್‌ ತೇಜಾ ಅವರು ಚಿರಂಜೀವಿ ಮತ್ತು ಪವನ್‌ ಕಲ್ಯಾಣ್‌ ಅಭಿಮಾನಿಗಳಿಗೆ ವೀಡಿಯೊವೊಂದನ್ನು ಶೇರ್‌ ಮಾಡಿ ಸರ್ಪ್ರೈಸ್‌ ಕೊಟ್ಟಿದ್ದಾರೆ. ಇಬ್ಬರೂ ಪರಸ್ಪರರ ಸಿನಿಮಾ ಸೆಟ್‌ಗಳಿಗೆ ಭೇಟಿ ನೀಡಿ ಮಾತನಾಡಿದ ವೀಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. “#GODFATHER and #BHEEMLANAYAK visit each other’s film sets!” ಎಂದು ರಾಮ್‌ಚರಣ್‌ ವೀಡಿಯೋ ಟ್ವೀಟ್‌ ಮಾಡಿದ್ದಾರೆ. 93 ಸೆಕೆಂಡ್‌ಗಳ ಈ ವೀಡಿಯೋದ ಫಸ್ಟ್‌ ಪಾರ್ಟ್‌ನಲ್ಲಿ ‘ಖೈದಿ’ ಅವತಾರದಲ್ಲಿರುವ ಚಿರಂಜೀವಿ ಅವರು ಪವನ್‌ ಕಲ್ಯಾಣ್‌ರ ‘ಭೀಮ್ಲಾ ನಾಯಕ್‌’ ಸೆಟ್‌ಗೆ ಭೇಟಿ ನೀಡಿರುವ ವೀಡಿಯೋ ಬಿಟ್‌ ಇದೆ. ನಂತರ ಪವನ್‌ ಕಲ್ಯಾಣ್‌ ಅವರು ಚಿರಂಜೀವಿ ಅಭಿನಯದ ‘ಗಾಡ್‌ಫಾದರ್‌’ ಸಿನಿಮಾ ಸೆಟ್‌ಗೆ ಭೇಟಿ ಕೊಟ್ಟಿರುವ ವೀಡಿಯೋ ಇದ್ದು, ಹಿನ್ನೆಲೆಯಲ್ಲಿ ‘ಭೀಮ್ಲಾ ನಾಯಕ್‌’ ಹಾಡು ಕೇಳಿಸುತ್ತದೆ.

ಟಾಲಿವುಡ್‌ನ ಹಲವರು ಹಾಗೂ ಅಭಿಮಾನಿಗಳು ಈ ವೀಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇಂದು ಪವನ್‌ ಕಲ್ಯಾಣ್‌ ಮತ್ತು ರಾಣಾ ದಗ್ಗುಬಾಟಿ ಅಭಿನಯದ ‘ಭೀಮ್ಲಾ ನಾಯಕ್‌’ ಸಿನಿಮಾ ತೆರೆಕಾಣುತ್ತಿದೆ. ಚಿರಂಜೀವಿ ನಟನೆಯ ‘ಆಚಾರ್ಯ’ ತೆರೆಗೆ ಸಿದ್ಧವಾಗಿದ್ದು ಅವರೀಗ ‘ಭೋಲಾ ಶಂಕರ್‌’, ‘ಗಾಡ್‌ಫಾದರ್‌’ ಚಿತ್ರೀಕರಣದಲ್ಲಿದ್ದಾರೆ. ಇವಲ್ಲದೆ ಕೆ.ಎಸ್‌.ರವೀಂದ್ರ ಮತ್ತು ವೆಂಕಿ ಕುದುಮುಲ ನಿರ್ದೇಶನದಲ್ಲಿ ಅವರ ಚಿತ್ರಗಳು ತಯಾರಾಗಲಿವೆ. ಪವನ್‌ ಕಲ್ಯಾಣ್‌ ಅವರ ‘ಹರಿ ಹರ ವೀರಮಲ್ಲು’ ಪೀರಿಯಡ್‌ ಡ್ರಾಮಾದ ಚಿತ್ರೀಕರಣ ಜಾರಿಯಲ್ಲಿದೆ.

Previous articleಜೇಮ್ಸ್‌ ಮ್ಯಾನ್‌ಗೋಲ್ಡ್‌ ನಿರ್ದೇಶನದಲ್ಲಿ ಹಾಲಿವುಡ್‌ ಲೆಜೆಂಡ್‌ ಬಸ್ಟರ್‌ ಕೀಟನ್‌ ಬಯೋಪಿಕ್‌
Next articleಮಂಗಳಮುಖಿ ಪಾತ್ರದಲ್ಲಿ ರಾಜ್‌ಪಾಲ್‌ ಯಾದವ್‌; OTT ಯಲ್ಲಿ ರಿಲೀಸ್‌ ಆಗಲಿದೆ ‘ಅರ್ಧ್‌’

LEAVE A REPLY

Connect with

Please enter your comment!
Please enter your name here