ಪ್ರವಾಲ್‌ ರಾಮನ್‌ ನಿರ್ದೇಶನದಲ್ಲಿ ರಣದೀಪ್‌ ಹೂಡಾ ನಟಿಸಿರುವ ‘ಸರ್ಜೆಂಟ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಜೂನ್‌ 30ರಿಂದ JioCinemaದಲ್ಲಿ ಉಚಿತವಾಗಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

‘Sergeant’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್‌ ಸಿನಿಮಾವನ್ನು ಪ್ರವಾಲ್ ರಾಮನ್ ನಿರ್ದೇಶಿಸಿದ್ದು, ಅಜಯ್ ಜಿ ರೈ ಮತ್ತು ಮೋಹಿತ್ ಛಾಬ್ರಾ ನಿರ್ಮಿಸಿದ್ದಾರೆ. ರಣದೀಪ್ ಹೂಡಾ ಶೀರ್ಷಿಕೆ ಪಾತ್ರದಲ್ಲಿ ಅಭಿನಯಿಸಿದ್ದು, ಅರುಣ್ ಗೋವಿಲ್, ಆದಿಲ್ ಹುಸೇನ್ ಮತ್ತು ಸಪ್ನಾ ಪಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್‌ 30ರಿಂದ JioCinemaದಲ್ಲಿ ಉಚಿತವಾಗಿ ಸಿನಿಮಾ ಸ್ಟ್ರೀಮ್‌ ಆಗಲಿದೆ. ರಣದೀಪ್ ಹೂಡಾ ಪಾತ್ರದ ಪರಿಚಯದೊಂದಿಗೆ ಟ್ರೈಲರ್‌ ಪ್ರಾರಂಭವಾಗುತ್ತದೆ, ಸಿನಿಮಾದಲ್ಲಿ ರಣದೀಪ್ ಸಾರ್ಜೆಂಟ್ ನಿಖಿಲ್ ಶರ್ಮಾ ಆಗಿ ಕಾಣಿಸಿಕೊಂಡಿದ್ದಾರೆ. ಹುಡುಗಿಯೊಬ್ಬಳ ಸಾವಿನ ರಹಸ್ಯವನ್ನು ಭೇದಿಸಲು ಅವನು ಪ್ರಯತ್ನಿಸುತ್ತಿರುತ್ತಾನೆ. ಅವಳ ಸಾವಿಗೆ ಅತಿಯಾದ ಮಾದಕ ದ್ರವ್ಯ ಸೇವನೆ ಕಾರಣ ಎಂದು ಪ್ರಕರಣವನ್ನು ಮುಚ್ಚಿಹಾಕಿರುತ್ತಾರೆ. ಆದರೆ ನಿಖಿಲ್ ಆ ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸುತ್ತಾನೆ. ಕೆಲವು ನಿಯಮಗಳನ್ನು ಉಲ್ಲಂಘಿಸಿ, ಪ್ರಕರಣವನ್ನು ತನಿಖೆ ಮಾಡಿ ಕೊಲೆಗಾರನನ್ನು ಹುಡುಕಲು ಹೇಗೆ ಪ್ರಯತ್ನಿಸುತ್ತಾನೆ ಎಂಬುದನ್ನು ಸಿನಿಮಾ ತೋರಿಸಲಿದೆ. ನೇಹಾ ಕರ್ಗೇಟಿ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು, ಜಿಮ್ ಎಡ್ಗರ್ ಛಾಯಾಗ್ರಹಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here