ವಿವಾದಿತ ‘ದಿ ಕೇರಳ ಸ್ಟೋರಿ’ ಮಲಯಾಳಂ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಜೊತೆಗೂಡಿ ‘ಬಸ್ತಾರ್‌’ ಸಿನಿಮಾ ನಿರ್ಮಿಸುತ್ತಿದ್ದಾರೆ. ದಟ್ಟ ಕಾಡಿನ ಮಧ್ಯೆ ಕೆಂಪು ಧ್ವಜ ಮತ್ತು ರೈಫಲ್ ಇರುವ ಪೋಸ್ಟರ್‌ ಹಂಚಿಕೊಂಡಿದೆ ನಿರ್ಮಾಣ ಸಂಸ್ಥೆ. 2024ರ ಏಪ್ರಿಲ್‌ 5ರಂದು ಈ ಮಲಯಾಳಂ ಸಿನಿಮಾ ಬಿಡುಗಡೆಯಾಗಲಿದೆ.

‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಜೋಡಿಯಾಗಿದ್ದ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಶಾ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದಾರೆ. ಚಿತ್ರಕ್ಕೆ ‘ಬಸ್ತಾರ್’ ಎಂದು ನಾಮಕರಣ ಮಾಡಲಾಗಿದೆ. ಸತ್ಯ ಘಟನೆ ಆಧರಿಸಿ ತಯಾರಾಗುತ್ತಿರುವ ಸಿನಿಮಾ 2024ರ ಏಪ್ರಿಲ್‌ 5ರಂದು ತೆರೆಕಾಣಲಿದೆ. ಬಾಲಿವುಡ್‌ Trade analyst ತರಣ್ ಆದರ್ಶ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ದಿ ಕೇರಳ ಸ್ಟೋರಿ ತಂಡವು ಮತ್ತೆ ಒಂದಾಗುತ್ತಿದೆ. #TheKeralaStory ಬ್ಲಾಕ್‌ ಬಸ್ಟರ್ ಯಶಸ್ಸಿನ ನಂತರ, ಹೊಸ ಚಿತ್ರಕ್ಕಾಗಿ ಮತ್ತೆ ಜೊತೆಯಾಗಿದ್ದಾರೆ. ಚಿತ್ರ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ’ ಎಂದು ಬರೆದಿದ್ದಾರೆ. ಸನ್‌ಶೈನ್‌ ಪಿಕ್ಚರ್ಸ್‌ ಸಹ ಟ್ವಿಟರ್‌ನಲ್ಲಿ ಪೋಸ್ಟರ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಚಿತ್ರದ ಪೋಸ್ಟರ್‌ನಲ್ಲಿ ದಟ್ಟ ಕಾಡಿನ ಮಧ್ಯೆ ಕೆಂಪು ಧ್ವಜ ಮತ್ತು ರೈಫಲ್ ಕಾಣಿಸುತ್ತದೆ. ಪೋಸ್ಟರ್‌ನಲ್ಲಿ ʼರಾಷ್ಟ್ರವನ್ನೇ ಬೆಚ್ಚಿಬೀಳಿಸುವ ಗುಪ್ತ ಸತ್ಯ, ಬಸ್ತಾರ್ʼ ಎಂಬ ಸಂದೇಶ ಒಳಗೊಂಡಿದ್ದು, ಸಿನಿಮಾ ಜನರಲ್ಲಿ ಆಸಕ್ತಿ ಮೂಡಿಸುತ್ತದೆ.

Previous article‘ನೈಟ್‌ ಮ್ಯಾನೇಜರ್‌ ಸಿಸನ್‌ 2’ ಸರಣಿ | DisneyPlus Hotstarನಲ್ಲಿ ಜೂನ್‌ 30ರಿಂದ
Next article‘Sergeant’ ಟ್ರೈಲರ್‌ | ರಣದೀಪ್‌ ಹೂಡಾ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ JioCinemaದಲ್ಲಿ

LEAVE A REPLY

Connect with

Please enter your comment!
Please enter your name here