ಸುಜಯ್‌ ಘೋಷ್‌ ನಿರ್ದೇಶನದ ‘ಜಾನೇ ಜಾನ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಪಾನಿ ಕಾದಂಬರಿ ‘The Devotion of Suspect X’ ಆಧರಿಸಿ ತಯಾರಾಗಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಕರೀನಾ ಕಪೂರ್‌ ನಟಿಸಿದ್ದಾರೆ. ಸೆಪ್ಟೆಂಬರ್‌ 21ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ ಸಿನಿಮಾ.

ಕರೀನಾ ಕಪೂರ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಜಾನೆ ಜಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ಜೈದೀಪ್ ಅಹ್ಲಾವತ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಪಾನಿ ಕಾದಂಬರಿ ‘The Devotion of Suspect X’ ಆಧರಿಸಿ ತಯಾರಾಗಿರುವ ಚಿತ್ರವಿದು. ಕರೀನಾ ‘ಜಾನೆ ಜಾನ್’ ರೆಟ್ರೊ ಹಾಡನ್ನು ಹಾಡುತ್ತಿರುವ ಮೂಲಕ ಟೀಸರ್‌ ಆರಂಭವಾಗುತ್ತದೆ. ವಿಜಯ್ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಸಸ್ಪೆನ್ಸ್‌ ಮರ್ಡರ್ ಮಿಸ್ಟರಿಯಾಗಿದ್ದು ಸಾಕಷ್ಟು ಕುತೂಹಲಕಾರಿ ಘಟನೆಗಳನ್ನು ಒಳಗೊಂಡಿದೆ. ತಮ್ಮ ಮೊದಲ OTT ಪ್ರವೇಶದ ಕುರಿತು ಕರೀನಾ, ‘ಈ ಚಿತ್ರದಿಂದ Netflix ಮೂಲಕ OTT ಪ್ರವೇಶಿಸಲು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ. ಈ ಸಿನಿಮಾ ಕರೀನಾ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್‌ 21ರಿಂದ Netflix ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here