ಕನ್ನಡ ಚಿತ್ರರಂಗ ಕಂಡ ಮೇರು ನಟ ಅಂಬರೀಶ್ ಅಗಲಿ ಇಂದಿಗೆ ಮೂರು ವರ್ಷ. ನಟಿ, ಸಂಸದೆ ಸುಮಲತಾ ಅಂಬರೀಶ್‌, ನಟ ಅಭಿಷೇಕ್, ಶಾಸಕ ಗೋಪಾಲಯ್ಯ ಸೇರಿದಂತೆ ಚಿತ್ರರಂಗದ ಪ್ರಮುಖರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಬೆಳಗ್ಗೆ ಪೂಜೆ ಸಲ್ಲಿಸಿದರು.

ಕನ್ನಡ ಚಿತ್ರರಂಗ ಕಂಡ ಪ್ರಮುಖ ನಾಯಕನಟರೊಲ್ಲಬ್ಬರು ಅಂಬರೀಶ್‌. ತಮ್ಮ ನೇರ ನಡೆ, ನುಡಿಗೂ ಹೆಸರಾಗಿದ್ದ ನಟ. ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಸೇರಿದಂತೆ ಚಿತ್ರರಂಗದ ಇತರೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅಂಬರೀಶ್ ರಾಜಕಾರಣಿ ಕೂಡ. 2018ರ ನವೆಂಬರ್‌ 24ರಂದು ಅವರು ನಮ್ಮನ್ನಗಲಿದರು. ಇಂದಿಗೆ ಅವರು ಇಲ್ಲವಾಗಿ ಮೂರು ವರ್ಷ. ಅಂಬರೀಶ್ ತಾರಾ ಪತ್ನಿ, ಸಂಸದೆ ಸುಮಲತಾ, ಪುತ್ರ ಅಭಿಷೇಕ್ ಅಂಬರೀಶ್‌ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬೆಂಗಳೂರು ಮಹಾಲಕ್ಷ್ಮಿ ಲೇಔಟ್‌ ಶಾಸಕ ಗೋಪಾಲಯ್ಯ, ಹಿರಿಯ ನಟ ದೊಡ್ಡಣ್ಣ, ಚಿತ್ರನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೂ ಸಮಾಧಿಗೆ ಪೂಜೆ ಸಲ್ಲಿಸಿದರು. ಅಂಬರೀಶ್ ಸ್ಮರಣೆ ನಂತರ ಸುಮಲತಾ, ಅಭಿಷೇಕ್ ಅವರು ವರನಟ ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದರು. ಈ ವೇಳೆ ಅಂಬರೀಶ್ ಸ್ಮರಣೆ ನಿಮಿತ್ತ ಅನ್ನದಾನ ಏರ್ಪಾಟಾಗಿತ್ತು.

LEAVE A REPLY

Connect with

Please enter your comment!
Please enter your name here