ಚಲದವಾಡ ಶ್ರೀನಿವಾಸರಾವ್‌ ನಿರ್ಮಿಸಿ, ನಿರ್ದೇಶಿಸಿರುವ ಬಹುಭಾಷಾ ಸಿನಿಮಾ ‘ರೆಕಾರ್ಡ್‌ ಬ್ರೇಕ್‌’ ಇದೇ ಮಾರ್ಚ್‌ 8ರಂದು ತೆರೆಕಾಣುತ್ತಿದೆ. ಇಬ್ಬರು ಅನಾಥ ಹುಡುಗರ ಕತೆಯಿದು. ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಿತ್ರದ ಇಬ್ಬರು ಹೀರೋಗಳು. ರಗ್ದಾ ಇಫ್ತೇಕರ್ ಚಿತ್ರದ ನಾಯಕಿ.

ಚಲದವಾಡ ಶ್ರೀನಿವಾಸರಾವ್‌ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತೆಲುಗು ನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿದ್ದಾರೆ. ಮೂಲತಃ ಉದ್ಯಮಿಯಾದ ಅವರಿಗೆ ಸಿನಿಮಾ ಬಗ್ಗೆ ವಿಪರೀತ ವ್ಯಾಮೋಹ. ನಿರ್ಮಾಣದ ಜೊತೆ ನಿರ್ದೇಶಕನ ಜಬಾಬ್ದಾರಿ ಹೊತ್ತಿರುವ ಅವರ ‘ರೆಕಾರ್ಡ್‌ ಬ್ರೇಕ್‌’ ಸಿನಿಮಾ ಇದೇ ಮಾರ್ಚ್‌ 8ರಂದು ತೆರೆಕಾಣುತ್ತಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಲಿ, ಒಡಿಯಾ ಭಾಷೆಗಳಲ್ಲಿ ಏಕಕಾಲಕ್ಕೆ ಭಾರತದಾದ್ಯಂತ ಎರಡು ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಅವರ ಸಿನಿಮಾ ರಿಲೀಸ್‌ ಆಗುತ್ತಿದೆ. ಚಂಟಿ ಹಾಗೂ ಬಂಟಿ ಎಂಬ ಅನಾಥ ಹುಡುಗರಿಬ್ಬರು ತಾವು ಅಂದುಕೊಂಡದ್ದನ್ನು ಹಾಗೂ ಯಾರು ನಿರೀಕ್ಷಿಸದ್ದನ್ನು ಸಾಧಿಸುವ ಕಥೆ ಚಿತ್ರದ್ದು. ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಿತ್ರದ ಇಬ್ಬರು ಹೀರೋಗಳು. ರಗ್ದಾ ಇಫ್ತೇಕರ್ ಚಿತ್ರದ ನಾಯಕಿ.

ಚಲದವಾಡ ಶ್ರೀನಿವಾಸರಾವ್‌ ತಮ್ಮ ಸಿನಿಮಾ ಕುರಿತು ಮಾತನಾಡಿ, ‘ನಾನು ಮೂಲತಃ ಟಿಂಬರ್ ಉದ್ಯಮಿ. ನಮ್ಮ ಸಂಸ್ಥೆಯಿಂದ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. ದುಡ್ಡು ಮಾಡುವುದಕ್ಕಿಂತ ನೋಡುಗರಿಗೆ ಒಳ್ಳೆಯ ಚಿತ್ರ ಕೊಡುವ ಆಸೆ ನನ್ನದು. ಈ ನಿಟ್ಟಿನಲ್ಲಿ ಇಂಥದ್ದೊಂದು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ. ಸತ್ಯಕೃಷ್ಣ, ಸಂಜನಾ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ನಾಯಕರಾದ ನಿಹಾರ್, ನಾಗಾರ್ಜುನ, ನಾಯಕಿ ರಗ್ದಾ ಇಫ್ತೇಕರ್, ನಟಿ ಸತ್ಯಕೃಷ್ಣ ಹಾಗೂ ನಟ ಪ್ರಸನ್ನ ಕುಮಾರ್ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ನಿರ್ದೇಶಕ ಅಜಯ್ ಕುಮಾರ್ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

LEAVE A REPLY

Connect with

Please enter your comment!
Please enter your name here