ಹೊಂಬಾಳೆ ಬ್ಯಾನರ್‌ನಲ್ಲಿ ರಿಷಭ್‌ಶೆಟ್ಟಿ ಸಿನಿಮಾ ಮಾಡುತ್ತಾರೆ ಎಂದಾಗಲೇ ‘ಕಾಂತಾರ’ ಸುದ್ದಿಯಾಗಿತ್ತು. ಶೆಟ್ರು ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ. ಒಳ್ಳೇ ಕತೆ, ಸ್ಟಾರ್‌ಕಾಸ್ಟ್‌ಮಾಡ್ಕೊಂಡು ಸಿನಿಮಾ ಮಾಡಿದ್ದಾರೆ. ಕರಾವಳಿ ಸಂಸ್ಕೃತಿಯನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಪ್ರಸೆಂಟ್‌ ಮಾಡಿದ್ದಾರೆ.

‘ಇದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕತೆ’ ಎಂದಿದ್ದರು ‘ಕಾಂತಾರ’ ಚಿತ್ರದ ನಟ – ನಿರ್ದೇಶಕ ರಿಷಬ್‌ಶೆಟ್ಟಿ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಶಿವ. ಕಾಡಿನ ದೇವರ ಕಲ್ಲಿಗೆ ಕಿವಿಗೊಟ್ರೆ ದೈವ ಮಾತನಾಡಿದ ಹಾಗೆ ಕೇಳಿಸುತ್ತೆ ಅನ್ನೋದು ಶಿವನ ತಂದೆಯ ನಂಬಿಕೆ. ಇನ್ನೊಂದೆಡೆ ಕಾಡಿನ ಕಾವಲಿಗೆ ಬರುವ DRFOಗೆ ಕಾಡೆಂದರೆ ದೈವ. ಚಿತ್ರದ ಕೊನೆಗೆ ಶಿವ, ‘ಕಾಡೇ ಮಾತನಾಡಿದ ಹಾಗಾಯ್ತು’ ಎನ್ನುತ್ತಾನೆ. ‘ದೇವರ ಕಲ್ಲಿಗೆ ಕಿವಿಗೊಟ್ಟಿದ್ದಿದ್ರೆ ದೈವ ಮಾತನಾಡೋದು ಕೇಳಿಸ್ತಿತ್ತೇನೋ’ ಎನ್ನುವುದು DRFO ಮಾತು. ಹೀಗೆ, ಇಬ್ಬರ ನಂಬಿಕೆಗಳು ಬೇರೆ ಬೇರೆ ಆದ್ರೂ ಕಾಡಿನ ಕುರಿತ ಅವರ ಆಶಯ ಒಂದೇ ಆಗಿರುತ್ತದೆ.

ಶಿವ, DRFO, ಊರಿನ ಧಣಿ ಮತ್ತು ಕಾಡನ್ನೇ ತಮ್ಮ ಅಸ್ತಿತ್ವ ಅಂದ್ಕೊಂಡಿರೋ ಊರಿನ ಜನರ ಮಧ್ಯೆಯ ತಿಕ್ಕಾಟ ಚಿತ್ರದ ಕಥಾವಸ್ತು. ಮುಖ್ಯವಾಗಿ ಕರಾವಳಿ ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಕತೆ ಜೊತೆ ಹೆಣೆದಿದ್ದಾರೆ ರಿಷಭ್‌ಶೆಟ್ಟಿ. ಇಲ್ಲಿ ದೈವ, ಕಂಬಳ, ಭೂತಕೋಲ ಪ್ರಸ್ತಾಪವಾಗುತ್ತದೆ. ನಿರ್ದೇಶಕ ರಿಷಭ್‌ತಾವು ಹುಟ್ಟಿ ಬೆಳೆದ, ನೋಡಿದ ಸನ್ನಿವೇಶಗಳನ್ನೇ ಕತೆ ಮಾಡಿದ್ದಾರೆ. ಕಾಡಿನ ಮಧ್ಯೆ ಬದುಕುವ ಜನರ ಧಾರ್ಮಿಕ ನಂಬಿಕೆಗಳನ್ನು ಹೇಳುತ್ತಾರೆ. ನೇಟಿವಿಟಿಯ ಕತೆ ಮತ್ತು ರಿಚ್‌ಮೇಕಿಂಗ್‌ ಚಿತ್ರದಲ್ಲಿ ಎದ್ದು ಕಾಣಿಸುತ್ತದೆ.

‘KGF’ ಸಿನಿಮಾ ಮಾಡಿದ್ದ ಹೊಂಬಾಳೆ ಬ್ಯಾನರ್‌ನಲ್ಲಿ ರಿಷಭ್‌ಶೆಟ್ಟಿ ಸಿನಿಮಾ ಮಾಡುತ್ತಾರೆ ಎಂದಾಗಲೇ ‘ಕಾಂತಾರ’ ಸುದ್ದಿಯಾಗಿತ್ತು. ಶೆಟ್ರು ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ. ಒಳ್ಳೇ ಕತೆ, ಸ್ಟಾರ್‌ಕಾಸ್ಟ್‌ಮಾಡ್ಕೊಂಡು ಸಿನಿಮಾ ಮಾಡಿದ್ದಾರೆ. ಹೊಂಬಾಳೆ ಬ್ಯಾನರ್‌ನವ್ರು ದುಡ್ಡು ಖರ್ಚು ಮಾಡಿರೋದು, ಟೆಕ್ನೀಷಿಯನ್ಸ್‌ಎಲ್ರೂ ಒಳ್ಳೇ ಕೆಲಸ ಮಾಡಿರೋದು ಸ್ಕ್ರೀನ್‌ಮೇಲೆ ಕಾಣಿಸುತ್ತದೆ. ರಿಷಭ್‌ಶೆಟ್ಟಿ ಇಲ್ಲಿ ಕರಾವಳಿ ಸಂಸ್ಕೃತಿಯನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಪ್ರಸೆಂಟ್‌ಮಾಡಿದ್ದಾರೆ. ಈ ಹಿಂದೆ ಕಮರ್ಷಿಯಲ್‌ ಮಾದರಿಯಲ್ಲಿ ಇಂಥದ್ದೊಂದು ದೊಡ್ಡ ಪ್ರಯತ್ನ ನಡೆದಿರಲಿಲ್ಲ. ಸಿನಿಮಾದ ಫಸ್ಟ್‌ಹಾಫ್‌ಸಲೀಸಾಗಿ ಹೋಗುತ್ತೆ. ಸಿನಿಮಾದಲ್ಲಿ ಹಾಸ್ಯ ಸನ್ನಿವೇಶಗಳಿಗೆಂದೇ ಪ್ರತ್ಯೇಕ ಕಲಾವಿದರಲಿಲ್ಲ. ಶಿವ ಮತ್ತು ಆತನ ತಂಡದ ಸದಸ್ಯರ ಮಾತುಗಳಲ್ಲೇ ಹಾಸ್ಯ ಅಡಕವಾಗಿದೆ. ಶಿವ – ಲೀಲಾ ಲವ್‌ಟ್ರ್ಯಾಕ್‌, ‘ಸಿಂಗಾರ ಸಿರಿ’ ಸಾಂಗ್‌, ರಾಂಪ – ಅಬ್ಬು ಎಡವಟ್ಟುಗಳು ಪ್ರೇಕ್ಷಕರನ್ನು ಎಂಗೇಜ್‌ ಮಾಡುತ್ತವೆ. ಇಂಟರ್‌ವೆಲ್‌ನಂತರ ಕತೆಗೆ ಬೇರೇಯದ್ದೇ ಆಯಾಮ ಸಿಗುತ್ತದೆ.

ಸಿನಿಮಾದಲ್ಲಿ ಎಲ್ಲವೂ ಸರಾಗ ಎಂದು ಹೇಳಲಾಗದು. ಗುರುವ ಮತ್ತು ಬುಳ್ಳ ಪಾತ್ರಗಳಿಗೆ ಸಿನಿಮಾದಲ್ಲಿ ಹೆಚ್ಚು ಸ್ಕೋಪ್‌ಇದೆ. ಆದರೆ ನಿರ್ದೇಶಕರು ಈ ಪಾತ್ರಗಳನ್ನು ಕನ್ವಿನ್ಸಿಂಗ್‌ಆಗಿ ಆಡಿಯನ್ಸ್‌ಗೆ ಪ್ರಸೆಂಟ್‌ಮಾಡುವಲ್ಲಿ ಕೊಂಚ ಎಡವಿದ್ದಾರೆ. ಮೌನ, ಗಾಂಭೀರ್ಯದಲ್ಲೇ ಸ್ಕೋರ್‌ಮಾಡುವ ಕಿಶೋರ್‌ಪಾತ್ರಕ್ಕೆ ಕೊನೆಯ ಸನ್ನಿವೇಶಗಳಲ್ಲಿ ಇನ್ನೂ ಹೆಚ್ಚಿನ ಸ್ಪೇಸ್‌ಸಿಗಬೇಕಿತ್ತೇನೋ… ಇಂತಹ ಕೆಲವೇ ಲೋಪಗಳ ಹೊರತಾಗಿ ‘ಕಾಂತಾರ’ ಸಿನಿಮಾ ಉತ್ತಮ ಆಶಯ, ಮೇಕಿಂಗ್‌ನ ಕಾರಣಕ್ಕೆ ಇಷ್ಟವಾಗುತ್ತದೆ.

ನಟ, ನಿರ್ದೇಶಕರಾಗಿ ರಿಷಭ್‌ಪ್ರತಿಭೆ ಈಗಾಗ್ಲೇ ಸಾಬೀತಾಗಿದೆ. ‘ಕಾಂತಾರ’ದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆರಂಭದಿಂದ ‘ಶಿವ’ನಾಗಿ ಅಬ್ಬರಿಸುವ ಅವರು ಕ್ಲೈಮ್ಯಾಕ್ಸ್‌ನಲ್ಲಿ ಪಾತ್ರವನ್ನು ಜೀವಿಸಿದ್ದಾರೆ. ನಟ ಕಿಶೋರ್‌ಗಾಂಭೀರ್ಯದ ಪಾತ್ರ ‘ಶಿವ’ನ ಅಬ್ಬರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಈ ಪಾತ್ರದಲ್ಲಿ ಕಿಶೋರ್‌ಹೊರತಾಗಿ ಮತ್ತಾರನ್ನೂ ಕಲ್ಪಿಸಿಕೊಳ್ಳೋದು ಕಷ್ಟ.

ಸಹಜ ನಟನೆಯ ಅಚ್ಯುತ್‌ಕುಮಾರ್‌ಎಂದಿನಂತೆ ಫಸ್ಟ್‌ಕ್ಲಾಸ್‌. ‘ಧಣಿ’ ಪಾತ್ರಧಾರಿ ಅಚ್ಯುತ್‌ಕುಮಾರ್‌ಮತ್ತು DRFO ಕಿಶೋರ್‌ಮುಖಾಮುಖಿ ಆಗುವ ಒಂದು ಸನ್ನಿವೇಶ ಇಷ್ಟವಾಗುತ್ತದೆ. ‘ಸಿಂಗಾರ ಸಿರಿ’ಯಾಗಿ ಸಪ್ತಮಿ ಗೌಡ, ಶಿವ ಗ್ಯಾಂಗ್‌ನ ಪ್ರಕಾಶ್‌ತುಮಿನಾಡು, ಪುಷ್ಪರಾಜ್‌ಬೋಳಾರ್‌, ಶನಿಲ್‌ಗುರು ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಸಿನಿಮಾಟೋಗ್ರಾಫರ್‌ಅಶೋಕ್‌ಕಶ್ಯಪ್‌, ಮ್ಯೂಸಿಕ್‌ಡೈರೆಕ್ಟರ್‌ಅಜನೀಶ್‌ಲೋಕನಾಥ್‌ತೆರೆಯ ಹಿಂದಿನ ಹೀರೋಗಳು. ಹಿನ್ನೆಲೆ ಸಂಗೀತದಲ್ಲಿ ಕರಾವಳಿ ಜನಪದ ವಾದ್ಯಗಳನ್ನು ಬಳಕೆ ಮಾಡಿರುವ ಪ್ರಯೋಗ ಚಿತ್ರದ ಆಶಯಕ್ಕೆ ಪೂರಕವಾಗಿದೆ. ಕೆರಾಡಿ ಕಾಡು, ಕರಾವಳಿ ಸಂಸ್ಕೃತಿಯ ವೈವಿಧ್ಯವನ್ನು ಕಣ್ತುಂಬಿಕೊಳ್ಳಬೇಕು ಅಂದರೆ ‘ಕಾಂತಾರ’ ವೀಕ್ಷಿಸಿ. ಥಿಯೇಟರ್‌ನಲ್ಲೇ ವೀಕ್ಷಿಸಿದರೆ ಪರಿಣಾಮಕಾರಿ ಅನುಭವ ನಿಮ್ಮದಾಗುತ್ತದೆ.

LEAVE A REPLY

Connect with

Please enter your comment!
Please enter your name here