‘ಪಠಾಣ್‌’, ‘ಜವಾನ್‌’ ನಂತರ ಈ ವರ್ಷ ಶಾರುಖ್‌ ಖಾನ್‌ ಅವರ ‘ಡಂಕಿ’ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ರಾಜಕುಮಾರ್‌ ಹಿರಾನಿ ನಿರ್ದೇಶನದ ಚಿತ್ರದಲ್ಲಿ ವಲಸಿಗರ ಕತೆ ಇರಲಿದೆ. ತಾಪ್ಸಿ ಪನ್ನು ಚಿತ್ರದ ನಾಯಕಿ.

ಶಾರುಖ್‌ ಖಾನ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಡಂಕಿ’ (Dunki) ಚಿತ್ರದ ಕಥೆ ಅನಾವರಣಗೊಂಡಿದೆ. ಚಿತ್ರದಲ್ಲಿ ಶಾರುಖ್‌ ಪಾತ್ರ ಹೇಗಿರಲಿದೆ ಎಂಬುದರ ಸುಳಿವನ್ನು ಈ ಮಾಹಿತಿ ನೀಡಲಿದೆ. ‘ಡಂಕಿ’ ಎಂದರೆ ಅದಕ್ಕೆ ‘ಡಾಂಕಿ ಫ್ಲೈಟ್’ ಎನ್ನುವ ಅರ್ಥವೂ ಇದೆ. ಅಂದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವುದು. ಅಮೆರಿಕ ಹಾಗೂ ಕೆನಡಾ ಭಾಗದಲ್ಲಿ ಇದು ಹೆಚ್ಚಾಗಿದೆ. ಇದೇ ಕಥೆಯನ್ನು ರಾಜ​ಕುಮಾರ್ ಹಿರಾನಿ ಹೇಳುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾದ ಕೆಲಸ ಶುರುವಾಗಿ ಸಾಕಷ್ಟು ಸಮಯ ಕಳೆದಿದೆ. ಶೀರ್ಷಿಕೆ ಬಿಡುಗಡೆ ಮಾಡಲು ಟೀಸರ್ ಹೊರತಂದಿದ್ದರು. ಇದನ್ನು ಬಿಟ್ಟರೆ ತಂಡದ ಕಡೆಯಿಂದ ಸಿನಿಮಾದ ಬಗ್ಗೆ ಅಷ್ಟೇನೂ ಮಾಹಿತಿ ಇರಲಿಲ್ಲ. ಈಗ ‘ಡಂಕಿ’ ಸಿನಿಮಾದ ಕಥೆಯ ಕುರಿತ ಹೊಸ ಸುದ್ದಿಯೊಂದು ಹರಿದಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿದ್ದು, ಈ ಚಿತ್ರದ ಕಥೆ ಅಕ್ರಮ ವಲಸೆ ಕುರಿತಾದ ಕಥಾಹಂದರ ಎನ್ನಲಾಗುತ್ತಿದೆ.

ರಾಜ​ಕುಮಾರ್ ಹಿರಾನಿ ಅವರು ಯಾವುದೇ ಸಿನಿಮಾ ಮಾಡಿದರೂ ಸಾಕಷ್ಟು ಅರ್ಥಪೂರ್ಣವಾಗಿ ಮಾಡುತ್ತಾರೆ. ಇದಕ್ಕೆ ‘ಪಿಕೆ’, ‘ಸಂಜು’ ಮೊದಲಾದ ಸಿನಿಮಾಗಳೇ ಸಾಕ್ಷಿ. ಈಗ ‘ಡಂಕಿ’ ಸಿನಿಮಾ ಕೂಡ ಇದೇ ಜಾಡಿನಲ್ಲಿ ಇರಲಿದೆ ಎನ್ನಲಾಗುತ್ತಿದೆ. Red Chillies Entertainment ಬ್ಯಾನರ್‌ ಅಡಿ ರಾಜಕುಮಾರ್‌ ಹಿರಾನಿ ಮತ್ತು ಗೌರಿ ಖಾನ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಕ್ರಿಸ್​ಮಸ್ ಪ್ರಯುಕ್ತ ಸಿನಿಮಾ ಡಿಸೆಂಬರ್ 22ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಜನವರಿ ತಿಂಗಳಲ್ಲಿ ತೆರೆಕಂಡು ಗೆದ್ದಿತ್ತು. ಈಗ ‘ಜವಾನ್’ ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈಗ ‘ಡಂಕಿ’ ಸಿನಿಮಾ ಕೂಡ ಗೆದ್ದರೆ ಒಂದೇ ವರ್ಷದಲ್ಲಿ ಶಾರುಖ್ ಖಾನ್​ಗೆ ಹಾಟ್ರಿಕ್‌ ಗೆಲುವು ಸಿಗಲಿದೆ.

LEAVE A REPLY

Connect with

Please enter your comment!
Please enter your name here