‘ರೇಡಿಯೋ ಮಿರ್ಚಿ’ ಖ್ಯಾತಿಯ RJ ರಚನಾ (39 ವರ್ಷ) ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಕೆಲವರ್ಷಗಳಿಂದ RJ ವೃತ್ತಿಯಿಂದ ಬ್ರೇಕ್‌ ಪಡೆದಿದ್ದ ಅವರು ಜೆಪಿ ನಗರದ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದ್ದರು.

ಬೆಂಗಳೂರು ನಗರದಲ್ಲಿ FM ರೇಡಿಯೋ ಸ್ಟೇಷನ್‌ಗಳು ಜನಪ್ರಿಯವಾಗಿದ್ದ ಕಾಲ ಅದು. ಮೂರ್ನಾಲ್ಕು ಜನಪ್ರಿಯ FMಗಳ ಪೈಕಿ ರೇಡಿಯೊ ಮಿರ್ಚಿ ಕೂಡ ಒಂದು. ಆಗ ‘ರೇಡಿಯೋ ಮಿರ್ಚಿ’ಯಲ್ಲಿ ರಚನಾ ಜನಪ್ರಿಯ RJ ಆಗಿದ್ದರು. ತಮ್ಮ ಮಾತು, ಟೈಮಿಂಗ್‌, ತಮಾಷೆಯಿಂದ ಅವರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹಲವಾರು ವರ್ಷಗಳ ಕಾಲ ರೇಡಿಯೋ ಮಿರ್ಚಿಯಲ್ಲಿ ಕಾರ್ಯನಿರ್ವಹಿಸಿದ್ದ ರಚನಾ 2016ರಲ್ಲಿ ಬ್ರೇಕ್‌ ಪಡೆದಿದ್ದರು. ವೈಯಕ್ತಿಕ ಕಾರಣಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಅವರು ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಉಸಿರು ಚೆಲ್ಲಿದರು ಎನ್ನಲಾಗಿದೆ. ಸಿಂಪಲ್‌ ಸುನಿ ನಿರ್ದೇಶನದಲ್ಲಿ ತಯಾರಾದ ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು ರಚನಾ.

LEAVE A REPLY

Connect with

Please enter your comment!
Please enter your name here