ನಟ ರಾಮಕುಮಾರ್‌ ಪುತ್ರ ಧೀರೇನ್‌ ರಾಮಕುಮಾರ್‌ ಚೊಚ್ಚಲ ಸಿನಿಮಾ ‘ಶಿವ 123’ ಟ್ರೈಲರ್‌ ಬಿಡುಗಡೆಯಾಗಿದೆ. ಇಂಟೆನ್ಸ್‌ ಲವ್‌ ಸ್ಟೋರಿ, high octane ಅಕ್ಷನ್‌ ಸನ್ನಿವೇಶಗಳು ಟ್ರೈಲರ್‌ನಲ್ಲಿ ಕಾಣಿಸುತ್ತಿವೆ. ಮಾನ್ವಿತಾ ಕಾಮತ್‌ ನಾಯಕಿಯಾಗಿರುವ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ವರನಟ ಡಾ.ರಾಜಕುಮಾರ್‌ ಅವರ ಮೊಮ್ಮಗ, ನಟ ರಾಮಕುಮಾರ್‌ ಪುತ್ರ ಧೀರೇನ್‌ ರಾಮ್‌ಕುಮಾರ್‌ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ‘ಶಿವ 123’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೊನ್ನೆ ಪ್ರೇಮಿಗಳ ದಿನದಂದು ರಿಲೀಸ್‌ ಆಗಿದ್ದ ಚಿತ್ರದ ಲವ್‌ ಸಾಂಗ್‌ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಟ್ರೈಲರ್‌ ಹೊರಬಿದ್ದಿದ್ದು, ವೈಲೆಂಟ್‌ ಲವ್‌ ಸ್ಟೋರಿ ಎನ್ನುವ ಸೂಚನೆ ಸಿಗುತ್ತಿದೆ. ಟ್ರೈಲರ್‌ ನೋಡಿದಾಗ 2018ರಲ್ಲಿ ತೆರೆಕಂಡ ‘RX 100’ ತೆಲುಗು ಸಿನಿಮಾದ ದೃಶ್ಯಗಳು ನೆನಪಾಗುತ್ತವೆ. ಆದರೆ ಚಿತ್ರತಂಡ ಇದು ತೆಲುಗು ಸಿನಿಮಾದ ರೀಮೇಕ್‌ ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ. ಜಯಣ್ಣ ಫಿಲ್ಮ್ಸ್‌ ನಿರ್ಮಾಣದ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಸಂಗೀತ ಸಂಯೋಜನೆ ಅರ್ಜುನ್‌ ಜನ್ಯ.

ಧೀರೇನ್‌ ನಟನೆಯ ಈ ಚಿತ್ರಕ್ಕೆ ಮೊದಲು ‘ದಾರಿ ತಪ್ಪಿದ ಮಗ’ ಎಂದು ನಾಮಕರಣ ಮಾಡಲಾಗಿತ್ತು. ರಾಜಕುಮಾರ್‌ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶೀರ್ಷಿಕೆ ‘ಶಿವ 123’ ಎಂದಾಯ್ತು. ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿನ ರಾಜಕುಮಾರ್‌ ಮತ್ತು ಜಯಮಾಲಾ ನಟನೆಯ ದೃಶ್ಯವೊಂದರಿಂದ
ಟ್ರೈಲರ್‌ ಆರಂಭವಾಗುತ್ತದೆ. ಹಿರೋಯಿನ್‌ ಮಾನ್ವಿತಾ ಕಾಮತ್‌ ಜೊತೆಗಿನ ರೊಮ್ಯಾಂಟಿಕ್‌ ಸನ್ನಿವೇಶಗಳು, ಕೊಂಚ ಹೆಚ್ಚೇ ಎನಿಸುವ ಕ್ರೌರ್ಯದ ದೃಶ್ಯಗಳಿದ್ದು, ಧೀರೇನ್‌ ಎನರ್ಜಿಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಕುಟುಂಬದಿಂದ ಪರಿಚಯವಾಗುತ್ತಿರುವ ಮತ್ತೊಬ್ಬ ಹೀರೋಗೆ ಶಿವರಾಜಕುಮಾರ್‌ ವೀಡಿಯೋ ಮೂಲಕ ಶುಭ ಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here