ಮಾಧವನ್‌ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘Rocketry: The Nambi Effect’ ಸಿನಿಮಾದ ಟ್ರೈಲರ್‌ Times Squareನಲ್ಲಿ ಸ್ಕ್ರೀನ್‌ ಆಗಿದೆ. ಇಸ್ರೋ ರಾಕೆಟ್‌ ವಿಜ್ಞಾನಿ ನಾರಾಯಣನ್‌ ಅವರ ಬದುಕು – ಸಾಧನೆ ಆಧರಿಸಿದ ಸಿನಿಮಾ ಜುಲೈ 1ರಂದು ತೆರೆಕಾಣುತ್ತಿದೆ.

ನಟ ಮಾಧವನ್‌ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘Rocketry: The Nambi Effect’ ಸಿನಿಮಾದ ಟ್ರೈಲರ್‌ ನ್ಯೂಯಾರ್ಕ್‌ನ Times Squareನಲ್ಲಿ ಸ್ಕ್ರೀನ್‌ ಆಗಿದೆ. ನಟ ಮಾಧವನ್‌ ಈ ಸಂದರ್ಭದ ವೀಡಿಯೋವನ್ನು, “Rocketry Trailer launch at NASDAQ billboard at Timesquare.” ಎನ್ನುವ ಸಂದೇಶದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರ ಈ ವೀಡಿಯೋಗೆ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ನಟ ಮಾಧವನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜುಲೈ 1ರಂದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಪ್ರೊಮೋಷನ್‌ ಅಂಗವಾಗಿ ಮಾಧವನ್‌ ಅಮೆರಿಕ ಪ್ರವಾಸದಲ್ಲಿದ್ದಾರೆ.

ISROದ ಮಾಜಿ ರಾಕೆಟ್‌ ಸೈಂಟಿಸ್ಟ್‌ ನಾರಾಯಣನ್‌ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ ಮಾಧವನ್‌. ಬೇಹುಗಾರಿಕೆ ಆರೋಪದ ಮೇಲೆ ನಾರಾಯಣನ್‌ ಅವರನ್ನು 1994ರಲ್ಲಿ ಬಂಧಿಸಲಾಗಿತ್ತು. ಅವರ ಮೇಲಿನ ಆರೋಪಗಳೆಲ್ಲವೂ ಸುಳ್ಳೆಂದು ಸುಪ್ರೀಮ್‌ ಕೋರ್ಟ್‌ 1998ರಲ್ಲಿ ತೀರ್ಪು ನೀಡಿತು. “ರಾಕೆಟ್‌ ಸೈನ್ಸ್‌, ಲಿಕ್ವಿಡ್‌ ಫ್ಯೂಯೆಲ್‌, ಎಸ್ಕೇಪ್‌ ವೆಲಾಸಿಟಿ… ಇವನ್ನೆಲ್ಲಾ ಚಿತ್ರ ನಿರ್ದೇಶಿಸುವವರಿಗೆ ಅರ್ಥಮಾಡಿಸುವುದು ಕಷ್ಟಸಾಧ್ಯ. ಒಂದು ಈ ಪ್ರಾಜೆಕ್ಟ್‌ ಕೈಬಿಡಬೇಕಿತ್ತು. ಇಲ್ಲವೇ ನಾನೇ ನಿರ್ದೇಶನ ಮಾಡಬೇಕಿತ್ತು. ಕೊನೆಗೆ ನಾನೇ ನಿರ್ದೇಶಿಸಲು ಧೈರ್ಯ ಮಾಡಿದೆ” ಎಂದು ತಾವು ನಿರ್ದೇಶಕರಾದದ್ದೇಕೆ ಎಂದು ವಿವರಿಸುತ್ತಾರೆ ಮಾಧವನ್‌. Phyllis Logan, Vincent Riotta, Ron Donachie ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ತಮಿಳು ತಾರೆ ಸೂರ್ಯ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

LEAVE A REPLY

Connect with

Please enter your comment!
Please enter your name here