ಪತ್ರಕರ್ತ, ನಿರ್ದೇಶಕ ಟಿ.ಜೆ.ಜ್ಞಾನವೇಲ್‌ ನಿರ್ದೇಶನದ ‘ಜೈಭೀಮ್‌’ ನವೆಂಬರ್‌ 2ರಿಂದ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ. ಇದು ಸೂರ್ಯ ನಟಿಸಿ, ನಿರ್ಮಿಸಿರುವ ತಮಿಳು ಸಿನಿಮಾ.

ಅಮೇಜಾನ್‌ ಪ್ರೈಂ ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ ಸೂರ್ಯ ನಿರ್ಮಿಸಿರುವ ‘ಜೈಭೀಮ್‌’ ಸ್ಟ್ರೀಮಿಂಗ್‌ ದಿನಾಂಕ ನಿಗಧಿಯಾಗಿದೆ. ಸೂರ್ಯ ಅವರ ‘2D ಎಂಟರ್‌ಟೇನ್‌ಮೆಂಟ್‌’ ಸಂಸ್ಥೆಯಡಿ ತಯಾರಾಗಿರುವ ಚಿತ್ರ ನವೆಂಬರ್‌ 2ರಂದು ಸ್ಟ್ರೀಮ್‌ ಆಗಲಿದೆ. ಪ್ರೈಮ್‌ ಜೊತೆಗಿನ ಒಪ್ಪಂದದ ಅನ್ವಯ ಸೂರ್ಯ ನಾಲ್ಕು ಚಿತ್ರ ನಿರ್ಮಿಸುತ್ತಿದ್ದು, ಮೂರನೇ ಚಿತ್ರವಾಗಿ ‘ಜೈಭೀಮ್‌’ ಸಿದ್ಧವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ನಟಿಸಿರುವ ಸೂರ್ಯ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

‘ಕೂಟಾಥಿಲ್‌ ಒರುಥನ್‌’ ಸಿನಿಮಾ ಖ್ಯಾತಿಯ ಚಿತ್ರನಿರ್ದೇಶಕ ಟಿ.ಜೆ.ಜ್ಞಾನವೇಲ್‌ ನಿರ್ದೇಶಿಸಿರುವ ‘ಜೈಭೀಮ್‌’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಜೀಷಾ ವಿಜಯನ್‌, ಪ್ರಕಾಶ್ ರಾಜ್‌ ಇದ್ದಾರೆ. ಅಮೇಜಾನ್‌ ಪ್ರೈಂ ಜೊತೆಗಿನ ಒಪ್ಪಂದದ ಅನ್ವಯ ಸೂರ್ಯ ನಿರ್ಮಾಣದ ‘ರಾಮನ್‌ ಆಂಡಾಲಂ ರಾವಣನ್‌ ಆಂಡಾಲಂ’ ಮೊದಲ ಚಿತ್ರವಾಗಿ ಸ್ಟ್ರೀಮ್ ಆಗಿತ್ತು. ಎರಡನೇ ಚಿತ್ರ ‘ಉಡನ್‌ಪಿರಪ್ಪೆ’ ಇದೇ ಅಕ್ಟೋಬರ್‌ 14ರಂದು ಸ್ಟ್ರೀಮ್ ಆಗಲಿದೆ. ನವೆಂಬರ್‌ 2ರಂದು ‘ಜೈಭೀಮ್‌’ ಬರಲಿದ್ದು, ಡಿಸೆಂಬರ್‌ನಲ್ಲಿ ‘ಓಹ್‌ ಮೈ ಡಾಗ್‌!’ ಡಿಸೆಂಬರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಸದ್ಯ ಸೂರ್ಯ ‘ಎಥಾರ್ಕಮ್‌ ತುನಿಂಧವನ್‌’ ತಮಿಳು ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ವೆಟ್ರಿಮಾರನ್‌ ನಿರ್ದೇಶನದಲ್ಲಿ ಅವರು ನಟಿಸಿರುವ ‘ವಾಡಿ ವಾಸಲ್‌’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿವೆ.

Previous article‘ಕೂರ್ಮಾವತಾರ’ ಸಿನಿಮಾಗೆ ಪ್ರೇರಣೆ ಏನು?; ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಮಾತು
Next articleಮುಂದುವರೆದ ‘ಕಬ್ಜ’ ಚಿತ್ರೀಕರಣ; ಮಿನರ್ವ ಮಿಲ್‌ನಲ್ಲಿ ಅದ್ಧೂರಿ ಸೆಟ್

LEAVE A REPLY

Connect with

Please enter your comment!
Please enter your name here