ದಕ್ಷಿಣ ಭಾರತದ ತಾರಾದಂಪತಿ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಬೇರ್ಪಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಈ ವಿಚ್ಛೇದನಕ್ಕೆ ವಿಧವಿಧವಾದ ಕಾರಣಗಳನ್ನು ಹೇಳುವ ಗಾಸಿಪ್ ಸುದ್ದಿಗಳು ಹರಿದಾಡುತ್ತಿವೆ.

ಸಮಂತಾ ಮತ್ತು ಚೈತನ್ಯ ಮೊನ್ನೆ ಟ್ವಿಟರ್‌ ಖಾತೆಗಳಲ್ಲಿ ತಾವು ಬೇರ್ಪಡುತ್ತಿರುವ ಸುದ್ದಿಯನ್ನು ಹೇಳಿಕೊಂಡಿದ್ದರು. “ಸಾಕಷ್ಟು ಯೋಚನೆ ಮಾಡಿದ ನಂತರ ನಾವಿಬ್ಬರೂ ಗಂಡ – ಹೆಂಡತಿಯಾಗಿ ನಮ್ಮ ಹಾದಿಯನ್ನು ಮುಂದುವರಿಸದಿರಲು ನಿರ್ಧರಿಸಿದ್ದೇವೆ ಎಂದು ನಮ್ಮ ಎಲ್ಲ ಹಿತೈಷಿಗಳಿಗೆ ಹೇಳಲು ಬಯಸುತ್ತೇವೆ. ಒಂದು ದಶಕದ ಸ್ನೇಹ ಸಿಕ್ಕಿದ್ದು ನಮ್ಮ ಅದೃಷ್ಟ. ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯ ಇರುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಮತ್ತು  ನಮಗೆ ಬೇಕಾದ ಗೌಪ್ಯತೆಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು” ಎಂದು ನಾಗ್ ಸಮಂತಾ ಹೇಳಿಕೊಂಡಿದ್ದರು.

ಈ ವಿಚ್ಛೇದನದ ಸುದ್ದಿ ಬಂದಾಗ, ಅದಕ್ಕೆ ಕಾರಣಗಳನ್ನು ಹುಡುಕ ಹೊರಟರೆ ಈ ಸಂಬಂಧದ ಸುತ್ತ ಅನೇಕ ವಿಧವಾದ ವದಂತಿಗಳು ಹಬ್ಬಿವೆ. ಅದರಲ್ಲಿ ಒಂದು ವದಂತಿ ತುಂಬಾ ಜನಪ್ರಿಯ. ಅದೇನೆಂದರೆ, ನಾಗ ಚೈತನ್ಯನ ಕುಟುಂಬ, ಸಮಂತಾ ತುಂಬಾ ಬೋಲ್ಡ್ ಪಾತ್ರಗಳನ್ನು ಮಾಡುವ ಬಗ್ಗೆ ಅಸಮಾಧಾನಗೊಂಡಿತ್ತು ಅನ್ನೋದು. ಇಷ್ಟು ದಿನ ಅದೇ ಕಾರಣ ಎಲ್ಲ ಕಡೆ ಓಡಾಡುತ್ತಿತ್ತು. ಆದರೆ ಈಗ ಅದರ ಜೊತೆ ಇನ್ನಷ್ಟು ಮಸಾಲೆಭರಿತ ಗಾಳಿಸುತ್ತಿಗಳು ಹಬ್ಬಿಕೊಂಡಿವೆ. ಈಗ ಬಂದಿರುವ ಇನ್ನೊಂದು ರೂಮರ್ ಪ್ರಕಾರ ಸಮಂತಾ ಡಿಸೈನರ್ ಒಬ್ಬರ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ. ಇನ್ನು, ನಾಗ ಚೈತನ್ಯ ಮತ್ತು ಸಮಂತಾ ತಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ ಎಂಬುದರ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಮತ್ತೊಂದು ವರದಿಯ ಪ್ರಕಾರ ದಂಪತಿಗಳು ಮಕ್ಕಳನ್ನು ಮಾಡಿಕೊಳ್ಳುವ ವಿಚಾರವಾಗಿ ಜಗಳವಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಂತರ ಕೆಲವು ಮಾಧ್ಯಮ ವರದಿಗಳು ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಾರೆ ಎಂದು ಹೇಳಿದ್ದವು. ಆದರೆ ಸಮಂತಾ ಇದನ್ನೆಲ್ಲಾ ಅಲ್ಲಗಳೆದು, “ಹೈದರಾಬಾದ್ ನನ್ನ ತವರು. ಅದು ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಇಲ್ಲಿಯೇ ಇರುತ್ತೇನೆ” ಎಂದು ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here