ಮೆಗಾಸ್ಟಾರ್‌ ಕುಟುಂಬದ ಹೀರೋ ಸಾಯಿ ಧರಮ್‌ ತೇಜ್‌ ನೂತನ ತೆಲುಗು ಸಿನಿಮಾ ಘೋಷಣೆಯಾಗಿದೆ. ‘SDT 18’ ತಾತ್ಕಾಲಿಕ ಶೀರ್ಷಿಕೆಯ ಇದು PAN ಇಂಡಿಯಾ ಪ್ರಾಜೆಕ್ಟ್‌ ಎನ್ನಲಾಗಿದೆ. ರೋಹಿತ್‌ ಕೆಪಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

‘ವಿರೂಪಾಕ್ಷ’ ಮತ್ತು ‘ಬ್ರೋ’ ಹಿಟ್‌ ಸಿನಿಮಾಗಳ ನಂತರ ನಟ ಸಾಯಿ ಧರಮ್ ತೇಜ್ ಹೊಸ ಸಿನಿಮಾ ತೆಲುಗು ಘೋಷಿಸಿದ್ದಾರೆ. ಈ ಬಾರಿ PAN ಇಂಡಿಯಾ ಸಿನಿಮಾ ಎನ್ನುವುದು ವಿಶೇಷ. ಇದು ಅವರ ಹದಿನೆಂಟನೇ ಸಿನಿಮಾ. ಮರುಭೂಮಿಯ ನಡುವೆ ಒಂಟಿ ಹಸಿರು ಮರ ಇರುವ ಪೋಸ್ಟರ್‌ ರಿಲೀಸ್‌ ಆಗಿದೆ. ಸಿನಿಮಾಗೆ #SDT 18 ಎನ್ನುವ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ರೋಹಿತ್ ಕೆ ಪಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಿಗೆ ಇದು ಮೊದಲ ಪ್ರಯತ್ನ. ಪ್ರೈಮ್‌ಶೋ ಎಂಟರ್‌ಟೇನ್‌ಮೆಂಟ್‌ ಬ್ಯಾನರ್ ಅಡಿ ನಿರಂಜನ್ ರೆಡ್ಡಿ ಹಾಗೂ ಚೈತ್ರಾ ರೆಡ್ಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಸದ್ಯ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here