ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ಸಿನಿಮಾದ ‘ಆಕಾಶ ಗಾಡಿಯ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಅವರ ಮೇಲೆ ಪಿಕ್ಚರೈಸ್‌ ಆಗಿರುವ ಹಾಡಿಗೆ ರವಿ ಬಸ್ರೂರು ಸಂಗೀತವಿದೆ. ಕಿನ್ನಾಲ್‌ ರಾಜ್‌ ಕನ್ನಡ ಅವತರಣಿಕೆಯ ಗೀತೆ ರಚಿಸಿದ್ದು, ವಿಜಯಲಕ್ಷ್ಮೀ ಮೆತ್ತಿನಹೊಳೆ ಹಾಡಿದ್ದಾರೆ.

ಬಹುನಿರೀಕ್ಷಿತ ‘ಸಲಾರ್ ಭಾಗ 1 : ಸೀಜ್‌ ಫೈರ್’ ಚಿತ್ರದ ಹಾಡು ಬಿಡುಗಡೆಯಾಗಿದೆ. ಸಿನಿಮಾವನ್ನು ಪ್ರಶಾಂತ್‍ ನೀಲ್‍ ನಿರ್ದೇಶಿಸುತ್ತಿದ್ದು, ಪ್ರಭಾಸ್‍ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ‘ಆಕಾಶ ಗಾಡಿಯ’ ಮೊದಲ ಲಿರಿಕಲ್‍ ಹಾಡು Hombale Films Youtube ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಇದೊಂದು ಭಾವನಾತ್ಮಕ ಹಾಡಾಗಿದ್ದು, ಇಬ್ಬರು ಗೆಳೆಯರ ನಡುವಿನ ಬಾಂಧವ್ಯ ಸಾರುತ್ತದೆ. ಅವರಿಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸುತ್ತದೆ. ಈ ಹಾಡನ್ನು ಕಿನ್ನಾಲ್ ರಾಜ್‍ ಬರೆದಿದ್ದು, ವಿಜಯಲಕ್ಷ್ಮೀ ಮೆತ್ತಿನಹೊಳೆ ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣ ಪತ್ರ ಪಡೆದಿರುವ ಚಿತ್ರವು ಎರಡು ಗಂಟೆ 55 ನಿಮಿಷಗಳ ಅವಧಿಯಲ್ಲಿದ್ದು, ಚಿತ್ರದಲ್ಲಿ ಬೃಹತ್‍ ಪ್ರಮಾಣ ಆ್ಯಕ್ಷನ್‍ ದೃಶ್ಯಗಳಿದೆ. ‘ಸಲಾರ್ ಪಾರ್ಟ್ 1: ಸೀಜ್‌ ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. Hombale Films ಬ್ಯಾನರ್‌ ಅಡಿ ವಿಜಯ್‍ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 22‌ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here