ಸಲ್ಮಾನ್ ಖಾನ್ ನಟನೆಯ ‘ಅಂತಿಮ್‌’ ಸಿನಿಮಾದ ‘ಕೋಯಿ ತೊ ಆಯೇಗಾ’ ಸಾಂಗ್ ಬಿಡುಗಡೆಯಾಗಿದೆ. ಸಲ್ಲೂ ಭಾಯ್ ಹಾಡನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕೆಜಿಎಫ್‌’ ಸಿನಿಮಾ ಖ್ಯಾತಿಯ ರವಿ ಬಸ್ರೂರು ‘ಅಂತಿಮ್‌’ಗೆ ಸಂಗೀತ ಸಂಯೋಜಿಸಿದ್ದು, ಸಿನಿಮಾ ಇದೇ 26ಕ್ಕೆ ತೆರೆಕಾಣಲಿದೆ.

‘ಕೋಯಿ ತೋ ಆಯೇಗಾ’ ಸಾಂಗ್‌ನಲ್ಲಿ ಸಲ್ಮಾನ್ ಖಾನ್‌ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಹಾಡಿನ ತುಂಬೆಲ್ಲಾ ಆಕ್ಷನ್ ಸೀನ್‌ಗಳಿದ್ದು, ಸಲ್ಲೂ ಖಡಕ್ ಪೊಲೀಸ್ ಪಾತ್ರಕ್ಕೆ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮಹೇಶ್ ಮಂಜ್ರೇಕರ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ಸಂಗೀತದ ಬಗ್ಗೆ ಹೇಳುವುದಾದರೆ, ಇಲ್ಲಿಯೂ ರವಿ ಬಸ್ರೂರು ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. “ಆಕ್ಷನ್ ಸಿನಿಮಾಗೆ ಬೇಕಾಗಿರುವ ಸಂಗೀತವನ್ನೇ ಕೊಟ್ಟಿದ್ದಾರೆ. ಇವರ ಮ್ಯೂಸಿಕ್ ಕಂಪೋಸಿಷನ್ ಚಿತ್ರದ ಪ್ಲಸ್ ಪಾಯಿಂಟ್‌” ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಂಜ್ರೇಕರ್‌. ‘ಅಂತಿಮ್‌’ ಸಲ್ಮಾನ್ ಖಾನ್ ಮತ್ತು ಆಯುಶ್ ಶರ್ಮಾ ಕಾಂಬಿನೇಷನ್‌ನ ಮೊದಲ ಸಿನಿಮಾ. ಸಲ್ಲೂ ಖಡಕ್ ಪೊಲೀಸ್‌ ಆಫೀಸರ್ ಆದರೆ, ಆಯುಶ್‌ ಗ್ಯಾಂಗ್‌ಸ್ಟರ್‌ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಿಮಾ ಮಖ್ವಾನಾ ಚಿತ್ರದ ನಾಯಕನಟಿ. ಚಿತ್ರ ಇದೇ ನವೆಂಬರ್‌ 26ರಿಂದ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here