ಕರಣ್ ಜೋಹರ್ ಅವರ ಚೊಚ್ಚಲ ನಿರ್ದೇಶನದ ‌’ಕುಚ್ ಕುಚ್ ಹೋತಾ ಹೈ’ (1998) ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 25 ವರ್ಷಗಳ ನಂತರ ಮತ್ತೆ ‘ದಿ ಬುಲ್‌’ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.

ಸಲ್ಮಾನ್‌ ಖಾನ್‌ ನಟಿಸಲಿರುವ ಮುಂದಿನ ಚಿತ್ರಕ್ಕೆ ‘ದಿ ಬುಲ್‌’ ಶೀರ್ಷಿಕೆ ನಿಗಧಿಯಾಗಿದ್ದು, ಈ ಹಿಂದಿ ಚಲನಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರದ ಕುರಿತು ಮಾತನಾಡಿದ್ದಾರೆ. Dharma Productions ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ ಎಂದಿದ್ದಾರೆ. ವರದಿಗಳ ಪ್ರಕಾರ ಈ ಆಕ್ಷನ್ – ಥ್ರಿಲ್ಲರ್‌ ಸಿನಿಮಾದಲ್ಲಿ ಸಲ್ಮಾನ್ ಅರೆಸೈನಿಕ ದಳದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್‌ ಖಾನ್‌ ಕರಣ್ ಜೋಹರ್ ಅವರ ಚೊಚ್ಚಲ ನಿರ್ದೇಶನದ ‌’ಕುಚ್ ಕುಚ್ ಹೋತಾ ಹೈ’ (1998) ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 25 ವರ್ಷಗಳ ನಂತರ ಮತ್ತೆ ‘ದಿ ಬುಲ್‌’ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್ ನಟನೆಯ ‘ಟೈಗರ್-‌3’ ಸಿನಿಮಾ ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here