ಅಕ್ಷಯ್‌ ಕುಮಾರ್‌ ಅಭಿನಯದ ‘OMG2’ ಸಿನಿಮಾ ಆಗಸ್ಟ್‌ 11ರಂದು ತೆರೆಕಾಣಲಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ ಸದ್ಗುರು ಚಿತ್ರವನ್ನು ವೀಕ್ಷಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀರೋ ಅಕ್ಷಯ್‌ ಜೊತೆಗಿನ ವೀಡಿಯೋವನ್ನು ಟ್ವೀಟ್‌ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ಅಕ್ಷಯ್‌ ಕುಮಾರ್‌ ನಟನೆಯ ‘OMG2’ ವರ್ಷದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲೊಂದು. ನಾಡಿದ್ದು ಸಿನಿಮಾ ತೆರೆಕಾಣುತ್ತಿದ್ದು, ಸದ್ಗುರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ಷಯ್‌ ಕುಮಾರ್‌ ತಮ್ಮ ಸಿನಿಮಾ ಕತೆಗಳ ಆಯ್ಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಕಾಮಿಡಿ ಹೊರತಾದ, ಸಂದೇಶ ನೀಡುವಂಥ ಕತೆಗಳಲ್ಲಿ ನಟಿಸುತ್ತಿದ್ದಾರೆ. ‘OMG2’ ಚಿತ್ರವೂ ಇದೇ ಮಾದರಿಯದ್ದು ಎನ್ನಲಾಗುತ್ತಿದೆ. ನಾಡಿದ್ದು ಸಿನಿಮಾ ತೆರೆಕಾಣುತ್ತಿದ್ದು, ಚಿತ್ರದ ಪ್ರಚಾರ ಭರದಿಂದ ನಡೆದಿದೆ. ಪ್ರಚಾರದ ಭಾಗವಾಗಿ ನಟ ಅಕ್ಷಯ್‌ ಕೊಯಮತ್ತೂರಿನಲ್ಲಿ ಇರುವ ಇಶಾ ಪೌಂಡೇಶನ್‌ಗೆ ಭೇಟಿ ನೀಡಿ ಸದ್ಗುರುವಿಗೆ ‘OMG2’ ಸಿನಿಮಾ ತೋರಿಸಿದ್ದಾರೆ. ಸದ್ಗುರು ಚಿತ್ರವನ್ನು ಮೆಚ್ಚಿ ತಂಡಕ್ಕೆ ಶುಭಹಾರೈಸಿದ್ದಾರೆ.

ಅಕ್ಷಯ್‌ ಭೇಟಿ ಕುರಿತು ಸದ್ಗುರು ಟ್ವೀಟ್‌ ಮಾಡಿ, ‘ನಮಸ್ಕಾರ ಅಕ್ಷಯ್ ಕುಮಾರ್.‌ ನೀವು ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ. ದೈಹಿಕ ಅಗತ್ಯತೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಮಾಹಿತಿಯೊಂದಿಗೆ ಯುವ ಜನತೆಗೆ ಶಿಕ್ಷಣ ನೀಡುವುದು ಅತ್ಯಗತ್ಯ. ಯುವಕರಿಗೆ ತಮ್ಮ ದೇಹ, ಮನಸ್ಸು, ಭಾವನೆಗಳನ್ನು ನಿಭಾಯಿಸಲು ಒಂದು ಉತ್ತಮ ಶಿಕ್ಷಣದ ಅವಶ್ಯಕತೆ ತುಂಬಾ ಇದೆ’ ಎಂದು ಪರೋಕ್ಷವಾಗಿ ಚಿತ್ರದ ವಿಷಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮರು ಉತ್ತರಿಸಿರುವ ಅಕ್ಷಯ್‌, ‘ನಮಸ್ಕಾರ ಸದ್ಗುರು. ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ. ಚಿತ್ರವನ್ನು ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಮತ್ತು ನಮ್ಮ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಸಿಕ್ಕಿದ್ದಕ್ಕಾಗಿ ಅಭಾರಿಯಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ನಾಡಿದ್ದು ಆಗಸ್ಟ್‌ 11ರಂದು ಸಿನಿಮಾ ತೆರೆಕಾಣಲಿದೆ.

Previous articleವೀರಪ್ಪನ್‌ ಕುರಿತ ವಾಸ್ತವ ವಿಚಾರಗಳನ್ನು ನಿರೂಪಿಸುವ ಸರಣಿ ‘The hunt for Veerappan’
Next article‘ದಿ ಫ್ರೀಲ್ಯಾನ್ಸರ್‌’ ಟೀಸರ್‌ | ನೀರಜ್‌ ಪಾಂಡೆ ಹಿಂದಿ ವೆಬ್‌ ಸರಣಿ DisneyPlus Hotstarನಲ್ಲಿ

LEAVE A REPLY

Connect with

Please enter your comment!
Please enter your name here