ಸಲ್ಮಾನ್‌ ಖಾನ್‌ ಮತ್ತು ಕತ್ರಿಕಾ ಕೈಫ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಟೈಗರ್‌ 3’ ಹಿಂದಿ ಸಿನಿಮಾದ ಪ್ರೋಮೊ ಬಿಡುಗಡೆಯಾಗಿದೆ. ಮನೀಶ್‌ ಶರ್ಮ ನಿರ್ದೇಶನದ ಈ ಚಿತ್ರದ ಖಳಪಾತ್ರದಲ್ಲಿ ಇಮ್ರಾನ್‌ ಹಶ್ಮಿ ನಟಿಸಿದ್ದಾರೆ. ನವೆಂಬರ್‌ 12ರಂದು ಸಿನಿಮಾ ತೆರೆಕಾಣಲಿದೆ.

ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಟೈಗರ್ ‌3’ ಹಿಂದಿ ಸಿನಿಮಾದ ಪ್ರೋಮೊ ಬಿಡುಗಡೆಯಾಗಿದೆ. ಈ ಹೈ ಆಕ್ಟೇನ್ ಆಕ್ಷನ್ ಚಿತ್ರವನ್ನು ಮನೀಶ್ ಶರ್ಮ ನಿರ್ದೇಶಿಸಿದ್ದಾರೆ. ಪ್ರೋಮೋದಲ್ಲಿ ಸಲ್ಮಾನ್‌ಗೆ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಇವರ, ‘ವಿಶ್ವದ ಭೂಪಟದಿಂದ ಭಾರತವನ್ನು ಅಳಿಸಿಹಾಕುತ್ತೇನೆ’ ಎನ್ನುವ ಡೈಲಾಗ್‌ ಪ್ರೋಮೋದಲ್ಲಿದೆ. ಕೊನೆಯಲ್ಲಿ ಸಲ್ಮಾನ್‌ ಖಾನ್‌ ‘ಜಬ್‌ ತಕ್‌ ಟೈಗರ್‌ ಮಾರಾ ನಹಿ ತಬ್ ತಕ್ ಟೈಗರ್ ಹಾರಾ ನಹೀ’ (ಎಲ್ಲಿವರೆಗೆ ಟೈಗರ್ ಸಾಯೋದಿಲ್ಲವೋ, ಅಲ್ಲಿವರೆಗೆ ಟೈಗರ್ ಸೋಲಲ್ಲ) ಎಂಬ ಡೈಲಾಗ್ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಅವಿನಾಶ್ ಸಿಂಗ್ ರಾಥೋಡ್ ಆಗಿ ಸಲ್ಮಾನ್ ಖಾನ್ ಮತ್ತು ಜೋಯಾ ಹುಮೈನಿ ರಾಥೋಡ್‌ ಪಾತ್ರದಲ್ಲಿ ಕತ್ರಿನಾ
ಕೈಫ್ ನಟಿಸಿದ್ದಾರೆ.

ಸಿನಿಮಾದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದು, ಸಿನಿಮಾಗೆ U/A ಪ್ರಮಾಣ ಪತ್ರ ಸಹ ದೊರೆತಿದೆ. ಪ್ರತಿ ವಾರವೂ ಚಿತ್ರದ ಕುರಿತಾದ ಹೊಸ ವಿಚಾರಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದ್ದು, ಈಗ ಈ ಪ್ರೋಮೋ ಹೆಚ್ಚು ಸುದ್ಧಿಯಲ್ಲಿದೆ. ದೇಶಕ್ಕಾಗಿ ಕುಟುಂಬವನ್ನೇ ಮುಡಿಪಾಗಿಟ್ಟು ಪತಿ-ಪತ್ನಿಯರಿಬ್ಬರೂ ಹೋರಾಡುವ ಕಥಾಹಂದರ ಚಿತ್ರದ್ದು. ಈ ಚಿತ್ರವು ‘ಏಕ್ ಥಾ ಟೈಗರ್’ (2012) ಮತ್ತು ‘ಟೈಗರ್ ಜಿಂದಾ ಹೈ’ (2017) ಚಿತ್ರಗಳ ಸೀಕ್ವೆಲ್‌. Yash Raj Films ಬ್ಯಾನರ್‌ ಅಡಿಯಲ್ಲಿ ಆದಿತ್ಯ ಚೋಪ್ರಾ ಸಿನಿಮಾ ನಿರ್ಮಿಸಿದ್ದಾರೆ. ಪ್ರೀತಮ್‌ ಸಂಗೀತ ಸಂಯೋಜಿಸಿದ್ದು, ಇರ್ಷಾದ್ ಕಾಮಿಲ್, ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ನವೆಂಬರ್ 12, 2023ರಂದು ಸಿನಿಮಾ ತೆರೆಕಾಣಲಿದೆ. ಈಗಾಗಲೇ ತೆರೆಕಂಡಿರುವ ‘ಟೈಗರ್’ ಚಿತ್ರದ ಭಾಗ ಒಂದು ಮತ್ತು ಎರಡರಲ್ಲಿ ಸಲ್ಮಾನ್‌ ಮತ್ತು ಕತ್ರಿನಾ ತೆರೆಹಂಚಿಕೊಂಡಿದ್ದರು, ಮೂರನೇ ಭಾಗದಲ್ಲೂ ಈ ಜೋಡಿ ಮುಂದುವರೆದಿದೆ.

LEAVE A REPLY

Connect with

Please enter your comment!
Please enter your name here