ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಶಾಲ್‌ ಅಭಿಮಾನಿಗಳಿಗಾಗಿ ಪುತ್ರ ದೇವಯಾನ್‌ ಫೋಟೊ ಹಂಚಿಕೊಂಡಿದ್ದಾರೆ. ಅವರ ಪುತ್ರನಿಗೆ ಈಗ ಆರು ತಿಂಗಳು. ಪುತ್ರನ ಹಾಫ್ ಬರ್ತ್‌ಡೇ ಆಚರಣೆಯ ಸಂಭ್ರಮದ ಫೋಟೊ ಹಂಚಿಕೊಂಡಿದ್ದಾರೆ ಶ್ರೇಯಾ.

ಗಾಯಕಿ ಶ್ರೇಯಾ ಘೋಶಾಲ್ ಮತ್ತು ಶಿಲಾದಿತ್ಯ ಮುಖ್ಯೋಪಾಧ್ಯಾಯ ಪುತ್ರ ದೇವಯಾನ್‌ಗೆ ಇಂದು ಆರು ತಿಂಗಳು ತುಂಬಿತು. ಹಾಫ್ ಬರ್ತ್‌ಡೇ ಆಚರಣೆಯ ಸಂಭ್ರಮದಲ್ಲಿ ಪುತ್ರನೊಂದಿಗಿನ ತಮ್ಮ ಫೋಟೊ ಹಂಚಿಕೊಂಡಿದ್ದಾರೆ ಶ್ರೇಯಾ. ಫೋಟೊ ಶೇರ್‌ ಮಾಡಿರುವ ಶ್ರೇಯಾ, “Hi, ನಾನು ದೇವಯಾನ್‌. ಇಂದು ನನಗೆ ಆರು ತಿಂಗಳು ತುಂಬಿತು. ಈಗ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇನೆ. ಪುಸ್ತಕಗಳನ್ನು ಓದುತ್ತಾ, ನನ್ನ ನೆಚ್ಚಿನ ಹಾಡುಗಳನ್ನು ಕೇಳುತ್ತಾ, ಸಿಲ್ಲಿ ಜೋಕ್‌ಗಳಿಗೆ ಜೋರಾಗಿ ನಗುತ್ತಾ, ಅಮ್ಮನೊಂದಿಗೆ ಗಂಭೀರ ಚಿಂತನೆ ನಡೆಸುತ್ತಾ ಕಾಲ ಕಳೆಯುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ” ಎಂದು ಪುತ್ರನ ಪರವಾಗಿ ತಾವೇ ಬರೆದಿದ್ದಾರೆ. ಶ್ರೇಯಾರ ಸ್ನೇಹಿತರು ಹಾಗೂ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. 2015 ಫೆಬ್ರವರಿ 5ರಂದು ಶ್ರೇಯಾ ಘೋಶಾಲ್ ಮತ್ತು ಶಿಲಾದಿತ್ಯ ಮುಖ್ಯೋಪಾಧ್ಯಾಯ ವಿವಾಹವಾಗಿದ್ದರು.

Previous article‘ಮೈಕಲ್’ ಸಿನಿಮಾದಲ್ಲಿ ಖಳನಾಗಿ ಗೌತಮ್ ಮೆನನ್; ಸಂದೀಪ್ ಕಿಶನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್
Next articleಟ್ರೈಲರ್ | ನೆಟ್‌ಫ್ಲಿಕ್ಸ್‌ನಲ್ಲಿ ರವೀನಾ ಟಂಡನ್; ‘ಅರಣ್ಯಕ್’ ಸರಣಿಯ ಪೊಲೀಸ್ ಪಾತ್ರದಲ್ಲಿ ನಟಿ

LEAVE A REPLY

Connect with

Please enter your comment!
Please enter your name here