cervical ಕ್ಯಾನ್ಸರ್‌ನಿಂದಾಗಿ ನಟಿ, ರೂಪದರ್ಶಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ನಿನ್ನೆ (ಫೆಬ್ರವರಿ 2) ಬಂದಿತ್ತು. ಸ್ವತಃ ಪೂನಂ ಅವರ ಮ್ಯಾನೇಜರ್‌ ನಿಧನ ಸುದ್ದಿಯನ್ನು ನಟಿಯ Instagram ಖಾತೆಯಲ್ಲಿ ಹಾಕಿದ್ದರು. ಇಂದು ಪೂನಂ, ‘ನಾನು ಬದುಕಿದ್ದೇನೆ’ ಎಂದು cervical ಕ್ಯಾನ್ಸರ್‌ ಜಾಗೃತಿ ಕುರಿತ ವೀಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಸುಳ್ಳು ಸುದ್ದಿ ಹರಡಿದ ನಟಿಯನ್ನು netizens ತರಾಟೆಗೆ ತೆಗೆದುಕೊಂಡಿದ್ದಾರೆ.

‘ನಾನು ಬದುಕಿದ್ದೇನೆ! cervical ಕ್ಯಾನ್ಸರ್‌ಗೆ ಬಲಿಯಾಗಿಲ್ಲ. ಆದರೆ, ಇದೇ ಮಾತನ್ನು cervical ಕ್ಯಾನ್ಸರ್‌ಗೆ ತುತ್ತಾಗಿರುವ ನೂರಾರು, ಸಾವಿರಾರು ಮಹಿಳೆಯರ ಬಗ್ಗೆ ಹೇಳಲಾಗುತ್ತಿಲ್ಲ. ಈ ಕ್ಯಾನ್ಸರ್‌ನಿಂದ ಹೊರಬರುವ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ’ ಎನ್ನುವ ವೀಡಿಯೋವೊಂದನ್ನು #DeathToCervicalCancer hash tagನೊಂದಿಗೆ ನಟಿ, ರೂಪದರ್ಶಿ ಪೂನಂ ಪಾಂಡೆ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘cervical ಕ್ಯಾನ್ಸರ್‌ನಿಂದಾಗಿ ಪೂನಂ ಪಾಂಡೆ ನಿಧನರಾಗಿದ್ದಾರೆ’ ಎನ್ನುವ ಸುದ್ದಿ ನಿನ್ನೆ ಹರಡಿತ್ತು. ಸ್ವತಃ ಪೂನಂ ಅವರ ಮ್ಯಾನೇಜರ್‌ ನಟಿಯ Instagram ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದರು. ಇಂದು ಪೂನಂ ವೀಡಿಯೋ ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ‘shock’ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. cervical ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾವು ತಮ್ಮ ‘ನಿಧನ ಸುದ್ದಿ’ ಹರಡಿದ್ದು ಎನ್ನುವುದು ನಟಿಯ ಸಮರ್ಥನೆಯಾಗಿದೆ.

https://www.instagram.com/reel/C24C_LyIy6m/?utm_source=ig_web_copy_link&igsh=MzRlODBiNWFlZA==

ಮತ್ತೊಂದು ವೀಡಿಯೋ ಕ್ಲಿಪ್‌ನಲ್ಲಿ ಅವರು ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ. ‘ಈ ಸುದ್ದಿಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ನನ್ನ ಉದ್ದೇಶ ಒಳ್ಳೆಯದೇ ಆಗಿತ್ತು. cervical cancerನಿಂದ ನಾನು ಅಗಲಿದ್ದೇನೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಎಲ್ಲರೂ ಈ ಖಾಯಿಲೆ ಬಗ್ಗೆ ಮಾತನಾಡತೊಡಗಿದರು. ನಿಧಾನವಾಗಿ ನಮ್ಮನ್ನು ಕೊಲ್ಲುವ ಈ ಅಪಾಯಕಾರಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾನು ಹೀಗೆ ಮಾಡಿದ. ನನ್ನ ನಿಧನ ಸುದ್ದಿ ಇಂಥದ್ದೊಂದು ಜಾಗೃತಿಗೆ ಕಾರಣವಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದಿದ್ದಾರೆ ಪೂನಂ.

https://www.instagram.com/reel/C24C5DCtyRU/?utm_source=ig_web_copy_link&igsh=MzRlODBiNWFlZA==

ಪೂನಂ ಪಾಂಡೆ ಅವರ ಈ ನಡೆಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಗಿಂತ ಕಿಡಿಕಾರುವ ಪ್ರತಿಕ್ರಿಯೆಗಳೇ ಹೆಚ್ಚಿವೆ. ‘cervical cancerನಂತಹ ಗಂಭೀರ ವಿಷಯವನ್ನು ಹೀಗೆ ಬಳಸಿಕೊಳ್ಳುವುದು ಚೀಪ್‌ PR’, ‘ಇದೊಂದು publicity stunt ಅಲ್ಲದೆ ಬೇರೇನೂ ಅಲ್ಲ’, ‘ಜಾಗೃತಿ ಮೂಡಿಸಲು ಹಲವು ದಾರಿಗಳಿವೆ. ಹೀಗೆ ಸಾವಿನ ಸುದ್ದಿಯೊಂದಿಗೆ ಜನರನ್ನು ಮೂರ್ಖರನ್ನಾಗಿಸುವುದು ತಪ್ಪು’, ‘ಜನರ ಗಮನ ಸೆಳೆಯಲು ಹೀಗೆಲ್ಲಾ ಮಾಡುವುದು ಸರಿಯಲ್ಲ’… ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಪೂನಂ ನಡೆಯನ್ನು ಖಂಡಿಸಿ ಸಾಕಷ್ಟು ಜನರು ಸಂದೇಶಗಳನ್ನು ಹಾಕಿದ್ದಾರೆ.

https://www.instagram.com/reel/C24MBqzNQDD/?utm_source=ig_web_copy_link&igsh=MzRlODBiNWFlZA==

LEAVE A REPLY

Connect with

Please enter your comment!
Please enter your name here