ನಟ ಸಲ್ಮಾನ್‌ ಖಾನ್‌ ರಚಿಸಿ, ಸಂಗೀತ ಸಂಯೋಜಿಸಿ ಹಾಡಿರುವ ‘ಡ್ಯಾನ್ಸ್‌ ವಿಥ್‌ ಮಿ’ ವೀಡಿಯೋ ಆಲ್ಬಂ ಸಾಂಗ್‌ ಬಿಡುಗಡೆಯಾಗಿದೆ. ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ಸಿನಿಮಾ ತಾರೆಯರೊಂದಿಗೆ ಸಲ್ಲೂ ಡ್ಯಾನ್ಸ್‌ ಮಾಡಿರುವ ವೀಡಿಯೋ ತುಣುಕುಗಳ ಕೊಲಾಜ್‌ ಈ ಸಾಂಗ್‌.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತೊಂದು ವೀಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಈ ಬಾರಿ ಅವರೇ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದಾರೆ ಎನ್ನುವುದು ವಿಶೇಷ. ನಾಲ್ಕು ನಿಮಿಷ ಇಪ್ಪತ್ತೊಂಬತ್ತು ನಿಮಿಷಗಳ ವೀಡಿಯೋ ಸಾಂಗ್‌ ತುಂಬಾ ಸಲ್ಮಾನ್‌ರ ಡ್ಯಾನ್ಸ್‌ ವೀಡಿಯೋ ತುಣುಕುಗಳಿವೆ. ಸಲ್ಲೂ ತಮ್ಮ ಅಪ್ಪ, ಅಮ್ಮ, ತಮ್ಮಂದಿರು, ತಂಗಿ, ಸಂಬಂಧಿಗಳನ್ನು ಡ್ಯಾನ್ಸ್‌ಗೆ ಆಹ್ವಾನಿಸುವ ಲಿರಿಕ್ಸ್‌ನೊಂದಿಗೆ ಸಾಂಗ್‌ ಶುರುವಾಗುತ್ತದೆ. ಆಗೆಲ್ಲಾ ಅವರೊಂದಿಗಿನ ಹಳೆಯ ಡ್ಯಾನ್ಸ್‌ ವೀಡಿಯೋ ತುಣುಕುಗಳು ಕಾಣಿಸುತ್ತವೆ. ಮುಂದೆ ಬಾಲಿವುಡ್‌ ಖ್ಯಾತನಾಮರೊಂದಿಗಿನ ಅವರ ಡ್ಯಾನ್ಸ್‌ ವೀಡಿಯೋ ತುಣುಕುಗಳು ಬರುತ್ತವೆ.

ಶಾರುಖ್‌ ಖಾನ್‌, ಅಮೀರ್‌ ಖಾನ್‌, ಅಕ್ಷಯ್‌ ಕುಮಾರ್‌, ಕತ್ರಿನಾ ಕೈಫ್‌, ಸುಷ್ಮಿತಾ ಸೇನ್‌, ಅನಿಲ್‌ ಕಪೂರ್‌, ಜಾಕಿ ಶ್ರಾಫ್‌, ಮಥುನ್‌ ಚಕ್ರವರ್ತಿ ಸೇರಿದಂತೆ ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ತಾರೆಯರೊಂದಿಗಿನ ಅವರ ಡ್ಯಾನ್ಸ್‌ ವೀಡಿಯೋ ತುಣುಕುಗಳು ಸಾಂಗ್‌ನಲ್ಲಿವೆ. “ನಿಮ್ಮ ಕುಟುಂಬ ಹಾಗು ಆತ್ಮೀಯರೊಂದಿಗೆ ಕುಣಿದು ನಲಿಯಿರಿ” ಎನ್ನುವ ಒಕ್ಕಣಿಯೊಂದಿಗೆ ಸಲ್ಮಾನ್‌ ವೀಡಿಯೋ ಅಲ್ಬಂ ಬಿಡುಗಡೆಯಾಗಿದೆ. ಈ ಹಿಂದೆ ಸಲ್ಲೂರ ‘ಪ್ಯಾರ್‌ ಕರೋನಾ’, ‘ಭಾಯಿ ಭಾಯಿ’, ‘ತೇರೆ ಬಿನಾ’ ವೀಡಿಯೋ ಸಾಂಗ್‌ಗಳು ಬಿಡುಗಡೆಯಾಗಿದ್ದವು.

LEAVE A REPLY

Connect with

Please enter your comment!
Please enter your name here