ಭಾರತೀಯ ಸೇನೆಯ ಮೊದಲ ಏರ್‌ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನಿಕ್ ಷಾ ಅವರ ಜೀವನ ಆಧಾರಿತ ಚಿತ್ರ ‘ಸ್ಯಾಮ್ ಬಹದ್ದೂರ್’ ಟ್ರೇಲರ್ ಬಿಡುಗಡೆಯಾಗಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಡಿಸೆಂಬರ್ 1ರಂದು ಸಿನಿಮಾ ತೆರೆಕಾಣಲಿದೆ.
ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸ್ಯಾಮ್ ಬಹದ್ದೂರ್’ ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭಾರತೀಯ ಸೇನೆಯ ಮೊದಲ ಏರ್‌ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನಿಕ್ ಷಾ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಚಿತ್ರವು ಅಪ್ಪಟ ದೇಶಪ್ರೇಮದ ಕಥೆ. ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಮೊದಲ ಏರ್ ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾನೆಕ್ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥೆಯನ್ನು ಸಿನಿಮಾದಲ್ಲಿ ತೆರೆದಿಡಲಾಗಿದೆ. 1971ರ ಇಂಡೋ- ಪಾಕ್ ನಡುವಿನ ಯುದ್ಧದ ಹಿನ್ನೆಲೆಯನ್ನು ಸಿನಿಮಾ ಒಳಗೊಂಡಿದೆ. ಟ್ರೇಲರ್ 1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್ ಮಾನೆಕ್ ಷಾ, ಪಾಕ್ ವಿರುದ್ಧದ
ಸಮರದಲ್ಲಿ ವಿಜಯ ಸಾಧಿಸುವ ಕೆಲವು ಅಂಶಗಳನ್ನು ಹೊಂದಿದೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ.
ಈ ಏರಿಳಿತ ದಾರಿಯಲ್ಲಿ ಯುದ್ಧದ ಜತೆಗೆ ರಾಜಕಾರಣವೂ ಸಿನಿಮಾದಲ್ಲಿ ಬೆಸೆದುಕೊಂಡಿದೆ. ಸ್ವಾತಂತ್ರಪೂರ್ವದ ಜತೆಗೆ ಸ್ವಾತ್ರಂತ್ರ್ಯಾನಂತರದ ಘಟನೆಗಳನ್ನೂ ಸಹ ಟ್ರೇಲರ್‌ನಲ್ಲಿ ಕಾಣಬಹುದು. ‘ಸ್ಯಾಮ್ ಬಹದ್ದೂರ್’ ಚಿತ್ರತಂಡ ಸುಮಾರು ಐದು ವರ್ಷಗಳಿಂದ ಕೆಲಸ ಮಾಡುತ್ತಿದೆ. ಡಿಸೆಂಬರ್ 2021ರಲ್ಲಿ ವಿಕ್ಕಿ ಕೌಶಲ್, ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಸೇರಿದಂತೆ ಉಳಿದ ಪಾತ್ರವರ್ಗವನ್ನು ಘೋಷಿಸಿದ್ದರು. ಈ ಚಿತ್ರವನ್ನು ಮೇಘನಾ ಗುಲ್ಜಾರ್ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಜೈ. ಐ ಪಟೇಲ್ ಛಾಯಾಗ್ರಾಹಣ, ಮಹರ್ಷ್ ಶಾ ಸಹಾಯಕ ನಿರ್ಮಾಣ, ನಿತಿನ್ ಬೈದ್ ಸಂಕಲನವಿದೆ. ಶಂಕರ್ ಎಹ್ಸಾನ್ ಲಾಯ್ ಸಂಗೀತ ಸಂಯೋಜಿಸಿದ್ದು, ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ನೀರಜ್ ಕಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಡಿಸೆಂಬರ್ 1, 2023ರಂದು ತೆರೆಕಾಣಲಿದೆ.