ಸುದೀಪ್‌ ನೂತನ ಸಿನಿಮಾ ಬಗ್ಗೆ ಕುತೂಹಲದಿಂದ ಸ್ಯಾಂಡಲ್‌ವುಡ್‌ ತಾರೆಯರು ಒಂದು ವೀಡಿಯೋ ಮಾಡಿದ್ದಾರೆ. ಸುದೀಪ್‌ ಈ ‘ಡೇಟ್‌ ಗೊತ್ತಾಯ್ತಾ!?’ ವೀಡಿಯೊವನ್ನು ಟ್ವೀಟ್‌ ಮಾಡಿ ಅವರಿಗೆಲ್ಲಾ ಥ್ಯಾಂಕ್ಸ್‌ ಹೇಳಿದ್ದಾರೆ. ಇಲ್ಲಿದೆ ಈ ವೀಡಿಯೋ..

ಮೊನ್ನೆಯಷ್ಟೇ ನಟ ಸುದೀಪ್‌ ಅವರ ಅಕ್ಕನ ಮಗ ಸಂಚಿತ್‌ ಸಂಜೀವ್‌ ಅವರ ನೂತನ ಸಿನಿಮಾ ‘ಜಿಮ್ಮಿ’ ಘೋಷಣೆಯಾಯ್ತು. ಈ ಸಂದರ್ಭದಲ್ಲಿ ಸುದೀಪ್‌ ತಮ್ಮ ನೂತನ ಸಿನಿಮಾ ಕುರಿತಾಗಿ ಏನೂ ಹೇಳಿರಲಿಲ್ಲ. ಮೊನ್ನೆ ಅವರು ತಮ್ಮ ನೂತನ ಸಿನಿಮಾ ಬಗ್ಗೆ ಟ್ವೀಟ್‌ ಮಾಡಿದಾಗ ಅಭಿಮಾನಿಗಳು ಸಂಭ್ರಮಿಸಿದ್ದರು. ‘Kiccha 46’ ಎನ್ನುವ ಪೋಸ್ಟರ್‌ ಜೊತೆಗೆ ನೂತನ ಸಿನಿಮಾದ Glimpses ಜುಲೈ 2ರಂದು ಮಧ್ಯಾಹ್ನ ಎನ್ನುವ ಒಕ್ಕಣಿ ಈ ಪೋಸ್ಟರ್‌ನಲ್ಲಿತ್ತು. ಈ ಸುದ್ದಿ ಅಭಿಮಾನಿಗಳಷ್ಟೇ ಅಲ್ಲದೆ ಸ್ಯಾಂಡಲ್‌ವುಡ್‌ನ ನಟ, ನಟಿಯರಿಗೂ ಖುಷಿ ಕೊಟ್ಟಿದೆ. ಈ ಬಗ್ಗೆ ಅವರೆಲ್ಲರೂ ಸೇರಿಕೊಂಡು ‘ಡೇಟ್‌ ಗೊತ್ತಾಯ್ತಾ!?’ ಎನ್ನುವ ಒಂದು ವೀಡಿಯೋ ಮಾಡಿದ್ದಾರೆ. ಇಂದು ಸುದೀಪ್‌ ಈ ಟ್ವೀಟ್‌ ಮಾಡಿ, ‘Thanks to all these lovely Collegues & Friends. This is a surprise’ ಎಂದು ಧನ್ಯವಾದ ಹೇಳಿದ್ದಾರೆ.

‘ವಿಕ್ರಾಂತ್‌ ರೋಣ’ ಸಿನಿಮಾ ತೆರೆಕಂಡು ಬಹಳಷ್ಟು ದಿನಗಳು ಕಳೆದರೂ ಸುದೀಪ್‌ ತಮ್ಮ ಹೊಸ ಸಿನಿಮಾ ಬಗ್ಗೆ ಏನೂ ಹೇಳಿರಲಿಲ್ಲ. ಅಭಿಮಾನಿಗಳಿಗೆ ಅವರ ನೂತನ ಸಿನಿಮಾ ಬಗ್ಗೆ ಕುತೂಹಲವಿತ್ತು. ಮೊನ್ನೆ ತಮ್ಮ 46ನೇ ಸಿನಿಮಾ ಬಗ್ಗೆ ಅವರು ಪೋಸ್ಟರ್‌ ಹಾಕಿದರು. ವಿಜಯ್‌ ಕಾರ್ತಿಕೇಯ ನಿರ್ದೇಶಿಸಲಿರುವ ಈ ಸಿನಿಮಾ ಯಾವ ಜಾನರ್‌ನದ್ದು ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಜುಲೈ 2ರಂದು ಮಧ್ಯಾಹ್ನ ಸಿನಿಮಾದ ಶೀರ್ಷಿಕೆ ಮತ್ತು Glimpses ಹೊರಬೀಳಲಿದೆ.

Previous article‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ದಿಗಂತ್‌ | ಜುಲೈ 7ಕ್ಕೆ ಫಸ್ಟ್‌ಲುಕ್‌
Next article‘ಶಾನುಭೋಗರ ಮಗಳು’ | ಕಾದಂಬರಿ ಆಧಾರಿತ ಸ್ವಾತಂತ್ರ್ಯಪೂರ್ವದ ಕತೆ

LEAVE A REPLY

Connect with

Please enter your comment!
Please enter your name here