ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡಕ್ಕೆ ನಟ ದಿಗಂತ್‌ ಸೇರ್ಪಡೆಯಾಗಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಅವರು ನಟಿಸಲಿದ್ದು ಜುಲೈ 7ಕ್ಕೆ ಫಸ್ಟ್‌ಲುಕ್‌ ಬಿಡುಗಡೆಯಾಗಲಿದೆ.

‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಶುರುವಿನಿಂದಲೂ ಸುದ್ದಿಯಲ್ಲಿದೆ. ಅಕಾಲಿಕವಾಗಿ ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರು ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ದರು. ಮುಂದೆ ಹಲವು ಸಂದರ್ಭಗಳಲ್ಲಿ ಸ್ಯಾಂಡಲ್‌ವುಡ್‌ ತಾರೆಯರಾದ ರಮ್ಯ, ರಕ್ಷಿತ್‌, ರಿಷಭ್‌ ಶೆಟ್ಟಿ ಚಿತ್ರದ ಪ್ರೊಮೋಷನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ನಟಿ ರಮ್ಯ ಅವರು ಚಿತ್ರದಲ್ಲಿ ನಟಿಸಿರುವ ಸೂಚನೆಯೂ ಇದೆ. ಈಗ ದಿಗಂತ್‌ ಚಿತ್ರದಲ್ಲಿ ನಟಿಸುವ ಮೂಲಕ ಹೊಸಬರ ತಂಡಕ್ಕೆ ಬಲ ತುಂಬಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಏನೂ ಹೇಳಿಕೊಂಡಿಲ್ಲ. ಜುಲೈ 7ಕ್ಕೆ ದಿಗಂತ್ ಪಾತ್ರದ ಲುಕ್ ರಿವೀಲ್ ಮಾಡಲು ಅವರು ಯೋಜನೆ ಹಾಕಿಕೊಂಡಿದ್ದಾರೆ. ಯೂತ್ ಸಬ್ಜೆಕ್ಟ್ ಕತೆಯ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸುತ್ತಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಿರ್ಮಿಸುತ್ತಿವೆ. ನಟ ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಸಿನಿಮಾ ಜುಲೈನಲ್ಲಿ ತೆರೆಗೆ ಬರಲಿದೆ.

Previous article‘ಲವ್‌’ ಸಿನಿಮಾ ‘ಕಣ್ಮಣಿ’ ಸಾಂಗ್‌ | ನೈಜ ಘಟನೆ ಆಧರಿಸಿದ ಲವ್‌ಸ್ಟೋರಿ
Next articleDate ಗೊತ್ತಾಯ್ತಾ!? | ಸುದೀಪ್‌ ಹೊಸ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ ತಾರೆಯರ ವೀಡಿಯೋ

LEAVE A REPLY

Connect with

Please enter your comment!
Please enter your name here