ರಂಜಿತ್‌ ಜೈಕೊಡಿ ನಿರ್ದೇಶನದಲ್ಲಿ ಸಂದೀಪ್‌ ಕಿಶನ್‌ ನಟಿಸುತ್ತಿರುವ ‘ಮೈಕಲ್’ ಬಹುಬಾಷಾ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ, ಗೌತಮ್ ಮೆನನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿರುವುದು ವಿಶೇಷ.

ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಮೈಕಲ್ ಚಿತ್ರ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಬಳಗಕ್ಕೆ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದರು. ಇದೀಗ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳಲು ಸಜ್ಜಾಗುತ್ತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ರಿಲೀಸ್ ದಿನಾಂಕವನ್ನೂ ಘೋಷಿಸಲಿದೆ. ಅದಕ್ಕೂ ಮುನ್ನ ಇದೀಗ ಈ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಆಗಿದೆ. ಮಾಸ್ ಆ್ಯಕ್ಷನ್ ಮತ್ತು ಕಮರ್ಷಿಯಲ್ ಅಂಶಗಳುಳ್ಳ ಸಿನಿಮಾ ಸದ್ಯ ಚಿತ್ರೀಕರಣದಲ್ಲಿ ಬಿಝಿಯಾಗಿದೆ. ಚಿತ್ರದಲ್ಲಿ ಕಿಶನ್‌ಗೆ ನಾಯಕಿಯರಾಗಿ ದಿವ್ಯಾಂಶ ಕೌಶಿಕ್, ವರಲಕ್ಷ್ಮಿ ಶರತ್ ಕುಮಾರ್ ನಟಿಸಿದರೆ‌, ವರುಣ್ ಸಂದೇಶ್ ಪ್ರಮುಖ ಪಾತ್ರದಲ್ಲಿದ್ದಾರೆ.

ಈವರೆಗೂ ಹೆಚ್ಚಾಗಿ ಕಂಟೆಂಟ್ ಬೇಸ್ಡ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಸಂದೀಪ್ ಕಿಶನ್, ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ಲುಕ್​ನಲ್ಲಿ ಎದುರಾಗುತ್ತಿದ್ದಾರೆ. ಈ ಸಿನಿಮಾದ ಸಲುವಾಗಿ ದೇಹವನ್ನು ಹುರಿಗೊಳಿಸಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರ, ಖಡಕ್ ಲುಕ್, ಲಾಂಗ್ ಹೇರ್‌ನಿಂದಲೇ ಹೊಸ ಸಂದೀಪ್ ಕಿಶನ್ ಸಿನಿಮಾದಲ್ಲಿ ಕಾಣಿಸಲಿದ್ದಾರೆ. ವಿಜಯ್ ಸೇತುಪತಿ, ಗೌತಮ್ ಮೆನನ್ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ನಿರ್ಮಾಣದ ಚಿತ್ರವನ್ನು ರಂಜಿತ್ ಜೈಕೊಡಿ ನಿರ್ದೇಶಿಸುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ.

Previous articleSoul Of Pepe; ವಿನಯ್ ರಾಜಕುಮಾರ್‌ ಬರ್ತ್‌ಡೇ ಸ್ಪೆಷಲ್‌
Next articleರೀಲ್ಸ್‌ ಮಾಡಿ ಐಫೋನ್‌ ಗೆಲ್ಲಿ!; ಇದು ‘ಬೆಂಕಿ’ ಸಿನಿಮಾದ ಆಫರ್‌

LEAVE A REPLY

Connect with

Please enter your comment!
Please enter your name here