ಶ್ರೀಲೇಶ್‌ ಎಸ್‌.ನಾಯರ್‌ ನಿರ್ದೇಶನದಲ್ಲಿ ವಿನಯ್‌ ರಾಜಕುಮಾರ್‌ ಅಭಿನಯಿಸಿರುವ ‘ಪೆಪೆ’ ಸಿನಿಮಾದ Soul Of Pepe ವೀಡಿಯೋ ಬಿಡುಗಡೆಯಾಗಿದೆ. ವಿನಯ್‌ ರಾಜಕುಮಾರ್‌ ಬರ್ತ್‌ಡೇ ವಿಶೇಷವಾಗಿ ರಿಲೀಸ್‌ ಆಗಿರುವ ವೀಡಿಯೋದ ಮೇಕಿಂಗ್‌, ಕಂಟೆಂಟ್‌ ಗಮನ ಸೆಳೆಯುತ್ತದೆ.

ವರನಟ ಡಾ.ರಾಜಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜಕುಮಾರ್‌ ಪುತ್ರ ವಿನಯ್‌ ರಾಜಕುಮಾರ್‌ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್‌ಡೇ ವಿಶೇಷವೆಂದು ಅವರ ‘ಪೆಪೆ’ ಚಿತ್ರದ Soul Of Pepe ವೀಡಿಯೋ ಬಿಡುಗಡೆಯಾಗಿದೆ. ಇದರ ಕಂಟೆಂಟ್‌ ಜೊತೆ ವೀಡಿಯೋ ಕಟ್‌ ಮಾಡಿರುವ ರೀತಿಯೂ ವಿಭಿನ್ನವಾಗಿದೆ. ಮಾಸ್ ಡೈಲಾಗ್‌ನಿಂದ ಶುರುವಾಗುವ ಝಲಕ್ ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದ್ದು, ವಿನಯ್ ರಗಡ್ ಲುಕ್, ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಂಟಿಂಗ್‌ ಹಿನ್ನೆಲೆ ಸಂಗೀತದೊಂದಿಗೆ ಕಲಾವಿದರ ಭಾವಗಳು ಕಾಡುತ್ತವೆ. ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕತೆ ‘ಪೆಪೆ’ ಸಂಪೂರ್ಣ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾ. ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶನದ ಚಿತ್ರವನ್ನು ಉದಯ್‌ ಶಂಕರ್‌ ಎಸ್‌. ನಿರ್ಮಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಹಿಂದೆ ‘ಸಿದ್ದಾರ್ಥ್’, ‘ರನ್ ಆಂಟನಿ’ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿದ್ದ ವಿನಯ್ ರಾಜಕುಮಾರ್‌ ‘ಪೆಪೆ’ಯಲ್ಲಿ’ಗ್ಯಾಂಗ್‌‌ಸ್ಟರ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಮನೆಮಾಡಿದೆ.

LEAVE A REPLY

Connect with

Please enter your comment!
Please enter your name here