ಅನೀಶ್‌ ತೇಜೇಶ್ವರ್‌ ಮತ್ತು ಸಂಪದ ಹೆಜ್ಜೆ ಹಾಕಿರುವ ‘ಬೆಂಕಿ’ ಸಿನಿಮಾದ ‘ಓಕೆ ನಾ?’ ಸಾಂಗ್‌ ಸಿನಿಪ್ರಿಯರಿಗೆ ಇಷ್ಟವಾಗಿದೆ. ಈಗ ಚಿತ್ರತಂಡ ಈ ಹಾಡಿಗೆ ಅತ್ಯುತ್ತಮವಾಗಿ ರೀಲ್ಸ್‌ ಮಾಡಿದವರಿಗೆ ಐಫೋನ್‌ ಕೊಡುವ ಆಫರ್‌ ನೀಡಿದೆ.

ಕಳೆದ ವಾರ ರಿಲೀಸ್‌ ಆದ ‘ಬೆಂಕಿ’ ಸಿನಿಮಾದ ‘ಓಕೆ ನಾ’ ವೀಡಿಯೋ ಸಾಂಗ್‌ ಕ್ಲಿಕ್ಕಾಗಿದೆ. ನಾಗಾರ್ಜುನ್‌ ಶರ್ಮ ರಚನೆ, ಆನಂದ್‌ ರಾಜವಿಕ್ರಮ್‌ ಸಂಗೀತ, ಐಶ್ವರ್ಯ ರಂಗರಾಜನ್‌ ಮತ್ತು ಪಂಚಮ್‌ ಜೀವ ಹಾಡಿರುವ ಗೀತೆಯನ್ನು ಸಿನಿಪ್ರಿಯರು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಇದೀಗ ‘ಬೆಂಕಿ’ ಚಿತ್ರದ ಬಳಗ ಈ ಹಾಡಿಗೆ ಸಂಬಂಧಿಸಿದಂತೆ ಆಫರ್‌ ನೀಡಿದೆ. ‘ಓಕೆ ನಾ?’ ಸಾಂಗ್‌ಗೆ ಅತ್ಯುತ್ತಮವಾಗಿ ರೀಲ್ಸ್ ಮಾಡಿದವರಿಗೆ ಬಹುಮಾನವಾಗಿ ಐಫೋನ್‌ ನೀಡುವುದಾಗಿ ಹೇಳಿಕೊಂಡಿದೆ ಚಿತ್ರತಂಡ. ಪಕ್ಕಾ ಮಾಸ್‌ ಹಾಗೂ ಕಮರ್ಷಿಯಲ್‌ ‘ಬೆಂಕಿ’ ಸಿನಿಮಾವನ್ನು ವಿಂಕ್ವಿಷನ್ ಪ್ರೊಡಕ್ಷನ್‌ ಬ್ಯಾನರ್‌ನಡಿ ಅನೀಶ್‌ ತೇಜೇಶ್ವರ್‌ ನಿರ್ಮಾಣ ಮಾಡುತ್ತಿದ್ದು, ಇದು ಇವರ ಹತ್ತನೇ ಸಿನಿಮಾ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌.ಬಾಬು ಅವರ ಪುತ್ರ ಶಾನ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಅಣ್ಣ-ತಂಗಿ ಸೆಂಟಿಮೆಂಟ್‌ ಕತೆಯ ಜೊತೆಗೆ, ಹಳ್ಳಿ ಸೊಡಗಿನ ಕಂಪು ಸಿನಿಮಾದಲ್ಲಿದೆ. ಸದ್ಯ ಸದ್ದು ಮಾಡುತ್ತಿರುವ ಹಾಡಿ ‘ಬೆಂಕಿ’‌ ಹಾಡಿನ ಸ್ಪರ್ಧೆಯೊಂದಿಗೆ ಸುದ್ದಿಯಲ್ಲಿದೆ ಚಿತ್ರತಂಡ.

Previous articleಸಂದೀಪ್ ಕಿಶನ್ ಪ್ಯಾನ್ ಇಂಡಿಯಾ ‘ಮೈಕಲ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ
Next articleON AIR ಸಿನಿಮಾದಲ್ಲಿ RJ ಶ್ರೀನಿ

LEAVE A REPLY

Connect with

Please enter your comment!
Please enter your name here