‘ಸಲಗ’ ಸಿನಿಮಾ ಖ್ಯಾತಿಯ ನಟಿ ಸಂಜನಾ ಆನಂದ್‌ ‘ಮುಧೋಳ್‌’ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಾರ್ತೀಕ್‌ ರಾಜನ್‌ ನಿರ್ದೇಶನದ ಚಿತ್ರದ ಹೀರೋ ವಿಕ್ರಂ ರವಿಚಂದ್ರನ್‌.

‘ಮುಧೋಳ್‌’ ಸಿನಿಮಾದಲ್ಲಿ ವಿಕ್ರಂ ರವಿಚಂದ್ರನ್‌ರಿಗೆ ನಾಯಕಿಯಾಗಿ ಸಂಜನಾ ಆನಂದ್‌ ನಟಿಸಲಿದ್ದಾರೆ. ಕಾರ್ತೀಕ್‌ ರಾಜನ್‌ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿದೆ. ಸಹಜಾಭಿನಯ ಮತ್ತು ಮುದ್ದು ಮುಖದ ನಟಿ ಸಂಜನಾ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದೊಂದಿಗೆ. ದುನಿಯಾ ವಿಜಯ್‌ ಜೋಡಿಯಾಗಿ ನಟಿಸಿದ್ದ ‘ಸಲಗ’ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಸದ್ಯ ತೆಲುಗು ಚಿತ್ರದಲ್ಲಿಯೂ ನಟಿಸುತ್ತಿರುವ ಸಂಜನಾ ಇದೀಗ ‘ಮುಧೋಳ್‌’ ಸಿನಿಮಾಗೆ ಆಯ್ಕೆಯಾಗಿದ್ದಾರೆ.

‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ರವಿಚಂದ್ರನ್‌ ಪುತ್ರ ವಿಕ್ರಮ್‌ ಅವರಿಗೆ ‘ಮುಧೋಳ್‌’ ಎರಡನೇ ಸಿನಿಮಾ. ಟೈಟಲ್‌ ಟೀಸರ್‌ನಲ್ಲಿ ವಿಕ್ರಂ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸಂಜನಾ ಇಲ್ಲಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಹಾಗೂ ತೆಲುಗಿನ ‘ಫುಲ್ ಬಾಟೆಲ್’ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ನಟಿಸುತ್ತಿರುವ ‘ಹಯಗ್ರೀವ’ ಚಿತ್ರಕ್ಕೂ ಅವರು ನಾಯಕಿ.

LEAVE A REPLY

Connect with

Please enter your comment!
Please enter your name here